Friday, March 29, 2024
spot_imgspot_img
spot_imgspot_img

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ತಂತ್ರಜ್ಞಾನ ಮಾಹಿತಿ ತರಬೇತಿ-2020 ಕಾರ್ಯಕ್ರಮದ ಸಮಾರೋಪ

- Advertisement -G L Acharya panikkar
- Advertisement -

ಹೊಸ ವಿಷಯಗಳನ್ನು ಕಲಿಯುವ ತುಡಿತ ಪ್ರತಿಯೊಬ್ಬ ಅಧ್ಯಾಪಕನಲ್ಲೂ ಇರಬೇಕು- ವತ್ಸಲಾರಾಜ್ಞಿ

ಪುತ್ತೂರು: ಶಿಕ್ಷಣ ಕ್ಷೇತ್ರ ನಿರಂತರ ಬದಲಾವಣೆಯ ಕ್ಷೇತ್ರವಾಗಿದೆ. ವೇಗವಾಗಿ ಆಲೋಚನೆ ಮಾಡಬಲ್ಲ ವಿದ್ಯಾರ್ಥಿಗಳ ನಡುವೆ ಅವರ ವೇಗದ ಗತಿಗೆ ತಕ್ಕಂತಹ ವೇಗವನ್ನು ಸಾಧಿಸಬೇಕಿದೆ. ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ, ಅವನ ಪ್ರತಿಭೆಯನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕರದ್ದು ಎಂದು ಇಂಜಿನಿಯರಿಂಗ್‌ನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದಲ್ಲಿ ಮೊದಲ ರ‍್ಯಾಂಕ್ ಪಡೆದ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿನಿ ಕು. ಸಿಂಧೂರ ಸರಸ್ವತಿ ಹೇಳಿದರು.

ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ಉಪನ್ಯಾಸಕರುಗಳಿಗೆ ಆಯೋಜಿಸಲಾಗಿರುವ ತಂತ್ರಜ್ಞಾನ ಆಧಾರಿತ ಮಾಹಿತಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಒಂದು ಕಾಲದ ಜೀವನದ ಪದ್ಧತಿ, ಶಿಕ್ಷಣದ ವ್ಯವಸ್ಥೆಗೂ ಮತ್ತು ಪ್ರಸ್ತುತ ಶಿಕ್ಷಣದ ವ್ಯವಸ್ಥೆಗೂ ಸಾಕಷ್ಟು ಬದಲಾವಣೆ ಇದೆ. ಕಾಲಕಾಲಕ್ಕೆ ಬದಲಾವಣೆ ಹೊಂದದೇ ಇರುವಂತಹುದು ಕಾಲಕ್ರಮದಲ್ಲಿ ನಶಿಸಿ ಹೋಗಿವೆ. ಹಳೆಯ ತಂತ್ರಜ್ಞಾನದೊಂದಿಗೆ ಇದ್ದ ಸಂಬಂಧವನ್ನು ಹೊಸ ತಂತ್ರಜ್ಞಾನದೊಂದಿಗೆ ತೆರೆದುಕೊಳ್ಳಬೇಕು. ಹಾಗಾಗಿ ಬದಲಾವಣೆಗಳನ್ನು ಇರಿಸಿಕೊಂಡು ಕೆಲಸ ಮಾಡುವುದರ ಜೊತೆಗೆ ಅಧ್ಯಾಪಕನು ಶ್ರೇಷ್ಠತೆ ಹಾದಿಯಲ್ಲಿ ಮುನ್ನಡೆಯಲು ಮತ್ತು ತಮ್ಮನ್ನು ಜಾಗೃತಾವಸ್ಥೆಯಲ್ಲಿಟ್ಟುಕೊಳ್ಳಲು ಈ ಬಗೆಯ ತರಬೇತಿ ಕಾರ್ಯಾಗಾರಗಳು ಸಹಾಯ ಮಾಡುತ್ತವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ವತ್ಸಲಾರಾಜ್ಞಿ ಮಾತನಾಡಿ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಜೀವನ ಮೌಲ್ಯವನ್ನು ರೂಪಿಸಬೇಕಾದ ಅಧ್ಯಾಪಕರು ಅವರ ಕಲಿಕೆಯಲ್ಲಿ ಆಸಕ್ತಿಯನ್ನು ಮೂಡಿಸಲು ಸಾಧ್ಯವಾದರೆ ಅದುವೇ ಶ್ರೇಷ್ಠವಾದ ಸಾಧನೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವಪೂರ್ಣವಾದುದು. ವಿದ್ಯಾರ್ಥಿಗಳು ಬದುಕಿನಲ್ಲಿ ಸೋತಾಗ ಸಮಸ್ಯೆಯನ್ನು ಎದುರಿಸುವ ಶಕ್ತಿಯನ್ನು ತುಂಬಬೇಕು. ಯಾವುದೇ ತರಬೇತಿಗಳು ಯಶಸ್ವಿಯಾಗುವುದು ವಿಷಯದ ಬಗೆಗಿನ ಆಸಕ್ತಿ ಮತ್ತು ಹೊಸ ವಿಷಯಗಳನ್ನು ಕಲಿಯುವ ತುಡಿತ ಇದ್ದಾಗ ಮಾತ್ರ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ವತ್ಸಲಾರಾಜ್ಞಿ , 2019-20 ನೇ ಸಾಲಿನ ವಿದ್ಯಾರ್ಥಿಗಳ ಪ್ರತಿಭೆಗೆ ಅವಕಾಶ ನೀಡುವ ವೇದಿಕೆಯಾದ ಕಾಲೇಜಿನ ಚಿಗುರು ವಾರ್ಷಿಕ ಸಂಚಿಕೆಯನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಿದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯ ರವಿ ಮುಂಗ್ಲಿಮನೆ, ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಗಣಕವಿಜ್ಞಾನ ವಿಭಾಗದ ಮುಖ್ಯಸ್ಥ ದೇವಿಚರಣ್ ರೈ ಉಪಸ್ಥಿತರಿದ್ದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಹರ್ಷಿತಾ ಮತ್ತು ವಾಣಿಜ್ಯ ವಿಭಾಗದ ಶ್ರೀಧರ ಶೆಟ್ಟಿಗಾರ್ ಕಾರ್ಯಾಗಾರದಲ್ಲಿ ತಮಗೆ ಆದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ರಶ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕ ಶ್ರೀಪತಿ ಸ್ವಾಗತಿಸಿ ದಯಾಮಣಿ ವಂದಿಸಿದರು.
ಒಟ್ಟು ಮೂರು ದಿವಸಗಳ ಕಾಲ ಈ ತರಬೇತಿ ಕಾರ್ಯಕ್ರಮವು ನಡೆದಿದ್ದು ಇದರಲ್ಲಿ ಪದ ಮತ್ತು ಎಕ್ಸೆಲ್‌ರಚನೆ, ಪವರ್ ಪೊಯಿಂಟ್, ನುಡಿ, ಯುಟ್ಯೂಬ್ ಚಾನೆಲ್ ರಚನೆ ಮತ್ತು ವಿಡಿಯೋಗಳನ್ನು ಅಪ್‌ಲೋಡ್ ಮತ್ತು ಸಂಪಾದನೆ ಮಾಡುವ ಬಗ್ಗೆ ಕಾಲೇಜಿನ ಗಣಕವಿಜ್ಞಾನ ವಿಭಾಗದ ಉಪನ್ಯಾಸಕರಿಂದ ಮಾಹಿತಿಯನ್ನು ತಿಳಿಸಿಕೊಡಲಾಗಿತ್ತು.

- Advertisement -

Related news

error: Content is protected !!