Wednesday, April 24, 2024
spot_imgspot_img
spot_imgspot_img

ಪುತ್ತೂರು: ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ಪರಮವೀರ ಚಕ್ರ ಪುರಸ್ಕೃತ ಯೋಧರ ಸಂಸ್ಮರಣೆಯ ಉಪನ್ಯಾಸ ಕಾರ್ಯಕ್ರಮ

- Advertisement -G L Acharya panikkar
- Advertisement -

ಪುತ್ತೂರು: ಭಾರತ ದೇಶವನ್ನು ಹೊರತು ಪಡಿಸಿ, ಬೇರೆ ಎಲ್ಲಾ ರಾಷ್ಟ್ರಗಳು ದೇಶದ ಆರ್ಥಿಕ ವ್ಯವಸ್ಥೆಯನ್ನು ಮಾತ್ರ ಯೋಚಿಸುತ್ತದೆ. ಆದರೆ ತ್ಯಾಗ ಮತ್ತು ದಾನದ ಕುರಿತು ಯೋಚಿಸುವ ಏಕೈಕ ರಾಷ್ಟ್ರವೆಂದರೆ ಅದು ಭಾರತ ಮಾತ್ರ. ಅಂತಹ ಶ್ರೇಷ್ಠ ಭೂಮಿಯಲ್ಲಿ ಜನಿಸಿದ ನಮ್ಮ ಆಲೋಚನೆಗಳು, ಆಡಂಭರದ ಜೀವನವನ್ನು ಮೀರಿ, ಜನ್ಮಭೂಮಿ, ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ, ಬಲಿದಾನ ಕ್ರಾಂತಿ, ಕಿಚ್ಚಿನ ಕಡೆ ಹೊರಳಬೇಕು ಎಂದು ಜೀವಶಾಸ್ತ್ರ ವಿಭಾಗದ ಉಪನ್ಯಾಸಕರು ಹಾಗೂ ಸಾಮಾಜಿಕ ಕಾರ್ಯಕರ್ತ ರಾಜೇಶ್ ಪದ್ಮಾರ್ ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಪರಮವೀರ ಚಕ್ರ ಪುರಸ್ಕೃತ ಯೋಧರ ಸಂಸ್ಮರಣೆ ಪ್ರಯುಕ್ತ ರಾಷ್ಟ್ರರಕ್ಷಣೆಯಲ್ಲಿ ಯೋಧರ ಶೌರ್ಯ-ಬಲಿದಾನಗಳ ಸಾಹಸಗಾಥೆಯ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನೀಡುತ್ತಾ ಅವರು ಮಾತನಾಡಿದರು.

ಪರಮ ವೀರ ಚಕ್ರ ಭಾರತ ಸೇನೆಯ ಶೌರ್ಯ ಪುರಸ್ಕಾರ. ಯುದ್ಧದ ವೇಳೆ ಅಪ್ರತಿಮ ಸಾಧನೆ ಮಾಡಿದವರಿಗೆ ಸಲ್ಲುವ ಪ್ರಶಸ್ತಿ. ಭಾರತದ ಅತ್ಯುಚ್ಚ ಸೇನಾ ಪುರಸ್ಕಾರ. ಅಪ್ರತಿಮ ಶೌರ್ಯ-ಸಾಹಸಕ್ಕಾಗಿ ಭಾರತದಲ್ಲಿ ದೊರೆಯುವ ಅತಿ ಶ್ರೇಷ್ಠ ಸಮ್ಮಾನ ಪರಮವೀರ ಚಕ್ರ. ದೇಶ ರಕ್ಷಣೆಗಾಗಿ ಕಿಚ್ಚಿನ ಹೋರಾಟ ನಡೆಸುವ ಇಂಥ ವೀರಯೋಧರ ಸಾಹಸಗಾಥೆಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಾರತದ ಹೆಮ್ಮೆ, ಶೌರ್ಯ ಮತ್ತು ಅಚಲ ನಾಯಕತ್ವಕ್ಕೆ ಕಾರ್ಗಿಲ್ ವಿಜಯ್ ದಿವಸ್ ಸಂಕೇತವಾಗಿದೆ. ಭಾರತೀಯ ಸೈನಿಕರ ಹೋರಾಟವು ಜಗತ್ತು ಇತ್ತೀಚೆಗೆ ಕಂಡ ಅತ್ಯಂತ ಶೌರ್ಯದ ಸಾಧನೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪರಮವೀರ ಚಕ್ರ ಪುರಸ್ಕೃತರಾದ ಭಗತ್‌ಸಿಂಗ್, ಸುಖ್‌ದೇವ್ ತಾಪರ್ ಮತ್ತು ಶಿವರಾಮ್ ರಾಜ್‌ಗುರು ಅವರ ದೇಶಾಭಿಮಾನ, ಸ್ವಾತಂತ್ರ‍್ಯದ ಕಿಚ್ಚು, ದೇಶಕ್ಕಾಗಿ ಪ್ರಾಣ ತ್ಯಾಗದ ಧೈರ್ಯವನ್ನು ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ಕಣ್ಣಿಗೆ ಕಟ್ಟುವಂತೆ ವಿವರಿಸಿ ಇಂದಿನ ಯುವಕರಿಗೆ ಮುಂದಿನ ದಿನಗಳಲ್ಲಿ ಭಾರತೀಯ ಸೇನೆಯ ಕುರಿತು ಜ್ಞಾನ, ಮಾರ್ಗದರ್ಶನ ಶಾಲೆ, ಕಾಲೇಜುಗಳಲ್ಲಿ ಸಿಗಬೇಕು ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಮಾತನಾಡಿ ತಾರುಣ್ಯದ ಹೊಸ್ತಿಲಲ್ಲಿ ತನ್ನ ಸ್ವ ಆಕಾಂಕ್ಷೆಗಳನ್ನು ಬದಿಗಿರಿಸಿ ದೇಶಕ್ಕೋಸ್ಕರ ಪ್ರಾಣಾರ್ಪಣೆ ಗೈಯುವ ಸೈನಿಕರ ತ್ಯಾಗ ನಮ್ಮಗೆಲ್ಲರಿಗೂ ಪ್ರೇರಕವಾಗಬೇಕು. ದೇಶದ ಚರಿತ್ರೆಯನ್ನು ಸರಿಯಾಗಿ ಅರಿತು ದೇಶಕ್ಕಾಗಿ ಸಮಯ ಕೊಡುವುದನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕಳೆದ ಶನಿವಾರ ಸಿಆರ್‌ಪಿಎಫ್ ಹಾಗೂ ಜಿಲ್ಲಾ ಮೀಸಲು ಸಶಸ್ತ್ರಪಡೆ ಜಂಟಿ ಕಾರ್ಯಚರಣೆಯಲ್ಲಿ ಭದ್ರತಾ ಪಡೆ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾಗಿದ್ದ 22 ಸೈನಿಕರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಉಪಸ್ಥಿತರಿದ್ದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಮೋನಿಷಾ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕ ದೇವಿಪ್ರಸಾದ್ ಸ್ವಾಗತಿಸಿ ದಿವ್ಯ ವಂದಿಸಿದರು.

- Advertisement -

Related news

error: Content is protected !!