Friday, April 19, 2024
spot_imgspot_img
spot_imgspot_img

ಬಂಟ್ವಾಳ: ಹಲವು ಪ್ರಕರಣಗಳ ವಾರೆಂಟ್ ಆರೋಪಿಯನ್ನು ಬಂಧಿಸಿದ ಪೊಲೀಸರು

- Advertisement -G L Acharya panikkar
- Advertisement -

ಬಂಟ್ವಾಳ: ಹಲವಾರು ಪ್ರಮುಖ ಪ್ರಕರಣದ ಆರೋಪಿಯನ್ನು ಬಂಟ್ವಾಳ ಡಿ.ವೈ.ಎಸ್.ಪಿ. ವೆಲೆಂಟೈನ್ ಡಿ.ಸೋಜ ನೇತೃತ್ವದ ವಿಶೇಷ ತಂಡ ಬಂಧಿಸಿದ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಮಂಗಳೂರು ತಾಲೂಕಿನ ಜೊಕಟ್ಟೆ ನಿವಾಸಿ ರಿಜ್ವಾನ್ ಯಾನೆ ರಿಚ್ಚು(30) ಎನ್ನಲಾಗಿದೆ.

ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದನ ಕಳ್ಳತನ ಸೇರಿದಂತೆ ಅನೇಕ ಪ್ರಕರಣಗಳಿಗೆ ಸಂಬ0ಧಿಸಿದ0ತೆ ಈತನ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳಿಗೆ ಸೇರಿದಂತೆ ಈತ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದ ಕಾರಣ ಈತನ ಮೇಲೆ ವಾರೆಂಟ್ ಜಾರಿಯಾಗಿದ್ದರೂ ತಲೆಮರೆಸಿಕೊಂಡು ತಿರುಗಾಡುವ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ ಡಿ.ವೈ.ಎಸ್.ಪಿ. ವೆಲೆಂಟೈನ್ ಡಿ.ಸೋಜ ಅವರ ತಂಡ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತನ ಮೇಲೆ ಬಂಟ್ವಾಳ ಅಲ್ಲದೆ ಕಾರ್ಕಳ ಗ್ರಾಮಾಂತರ ಪೋಲೀಸ್ ಠಾಣೆ, ಬಜಪೆ, ಪುತ್ತೂರು, ಗೋಕರ್ಣ, ಹಾಗೂ ಕೊಣಾಜೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಎಲ್ಲಾ ಪ್ರಕರಣಗಳಿಗೆ ಸಂಬ0ಧಿಸಿದ0ತೆ ವಾರೆಂಟ್ ಆರೋಪಿಯಾಗಿದ್ದ ಈತನನ್ನು ಬಂಧಿಸುವಲ್ಲಿ ಬಂಟ್ವಾಳ ಪೊಲೀಸರು ಯಶಸ್ವಿಯಾಗಿದ್ದಾರೆ.

driving
- Advertisement -

Related news

error: Content is protected !!