Saturday, June 13, 2026
spot_imgspot_img
spot_imgspot_img

ಬೆಳ್ತಂಗಡಿ: ನೀರಿನ ಟ್ಯಾಂಕರ್ ಪಲ್ಟಿ: ಓರ್ವ ಕಾರ್ಮಿಕ ಸಾವು

- Advertisement -
- Advertisement -

ಬೆಳ್ತಂಗಡಿ: ನೀರಿನ ಟ್ಯಾಂಕರ್ ಪಲ್ಟಿಯಾಗಿ ಓರ್ವ ಕಾರ್ಮಿಕ ಟ್ಯಾಂಕರ್ ನ ಅಡಿಗೆ ಸಿಲುಕಿ ಮೃತಪಟ್ಟ ಘಟನೆ ಕೊಕ್ಕಡದಲ್ಲಿ ನಡೆವದಿಸದೆ.

ಹಾವೇರಿ ನಿವಾಸಿಯಾಗಿರುವ ಸುರೇಶ್ ಮಲ್ಲಪ್ಪ ಹೊಸಮನಿ ಮೃತಪಟ್ಟ ಕಾರ್ಮಿಕ.

ಕೊಕ್ಕಡ ಗ್ರಾಮದ ಮೈಪಾಳದಲ್ಲಿ ಸೇತುವೆ ಮತ್ತು ಡ್ಯಾಮ್ ಕಾಮಗಾರಿ ನಡೆಯುತ್ತಿದ್ದು, ಸುರೇಶ್ ಮಲ್ಲಪ್ಪ ಇಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.ಟ್ಯಾಂಕರ್ ನಲ್ಲಿ ನೀರು ತುಂಬಿಕೊಂಡು ಬರುತ್ತಿದ್ದ ವೇಳೆ ಚಾಲಕ ಅಜಾಗರೂಕತೆಯಿಂದ ಟ್ಯಾಂಕರ್ ಚಲಾಯಿಸಿದ್ದರಿಂದ ನಿಯಂತ್ರಣ ಕಳೆದುಕೊಂಡು ಟ್ಯಾಂಕರ್ ಮಗುಚಿ ಬಿದ್ದಿದೆ. ಈ ವೇಳೆ ಟ್ಯಾಂಕರ್ ಅಡಿಗೆ ಸಿಲುಕಿದ ಸುರೇಶ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!