Friday, May 3, 2024
spot_imgspot_img
spot_imgspot_img

ವೀಕೆಂಡ್ ಕರ್ಫ್ಯೂ ಮತ್ತು ಖರೀದಿಗೆ ವಿಧಿಸಿದ ಸಮಯದ ಗೊಂದಲ

- Advertisement -G L Acharya panikkar
- Advertisement -

✍? – ಸಲೀಂ ಮಾಣಿ

ರಾಜ್ಯ ಸರಕಾರ ಹೊರಡಿಸಿದ ಕೊರೋನಾ ಹೊಸ ಮಾರ್ಗಸೂಚಿಯಲ್ಲಿ ವಿಧಿಸಿದ ವೀಕೆಂಡ್ ಕರ್ಫ್ಯೂ ದಿನ ಅಗತ್ಯ ವಸ್ತುಗಳನ್ನು ಖರೀದಿಸಲು ಎಂದು ಜಿಲ್ಲಾಡಳಿತ ಕೊಟ್ಟಿರುವ ಸಮಯ ಬಹಳ ಗೊಂದಲಮಯ ಮತ್ತು ಇಕ್ಕಟ್ಟಿನ ಪರಿಸ್ಥಿತಿ ಉಂಟು ಮಾಡಿದೆ.

ಬೆಳಿಗ್ಗೆ ಆರು ಗಂಟೆಯಿಂದ ಹತ್ತು ಗಂಟೆಯವರೆಗೆ ಮಾತ್ರ ನೀಡಿರುವ ಸಮಯದಲ್ಲಿ ಅದು ಹೇಗೆ ಖರೀದಿಸಲು ಸಾಧ್ಯ ? ರಜೆ ಇರುವ ಕಾರಣಕ್ಕಾಗಿ ಸಾಧಾರಣವಾಗಿ ಜನರು ನಿದ್ರೆಯಿಂದ ಏಳುವುದೇ ಲೇಟು, ಬಳಿಕ ಬೆಳಗ್ಗಿನ ಉಪಹಾರ ಮುಗಿಸಿ ಖರೀದಿಗೆ ಅಂಗಡಿಗಳಿಗೆ ತೆರಳುವಾಗಲೇ ಹತ್ತು ಗಂಟೆ ದಾಟಬಹುದು. ಒಮ್ಮೆಲೇ ನೂರಾರು ಜನರು ಖರೀದಿಗೆ ಮುಗಿ ಬೀಳುವುದರಿಂದ ಅಲ್ಲಿ ಸಾಮಾಜಿಕ ಅಂತರ ಸಾಧ್ಯವೇ ? ಖರೀದಿಗೆ ಬಂದ ಜನರಿಗೆ ಎಷ್ಟು ಅವಸರವಾಗಿ ಕೊಟ್ಟರೂ ಹತ್ತು ಗಂಟೆಯ ಮೊದಲು ಬಂದ್ ಮಾಡಲು ಸಾಧ್ಯವೇ ?

ಮಾಂಸದಂಗಡಿಗಳು ಬಂದ್ ಮಾಡುವ ಮೊದಲು ತೊಳೆದು ಶುಚಿ ಮಾಡಲು ಒಂದೆರಡು ಗಂಟೆ ಬೇಕಾಗುತ್ತದೆ ಹಾಗಾದರೆ ಹತ್ತು ಗಂಟೆಗೆ ಬಂದ್ ಮಾಡಲು ಅದು ಹೇಗೆ ಸಾಧ್ಯವಾಗುತ್ತದೆ ? ಹತ್ತು ಗಂಟೆಯವರೆಗೆ ಓಪನ್ ಇದೆ ಎಂದು ಹತ್ತು ಗಂಟೆ ಆಗುವಾಗಲೇ ನೂರಾರು ಜನರು ಅಂಗಡಿಗಳ ಮುಂದೆ ನೂಕು ನುಗ್ಗಲು ಮಾಡುವ ಸಾಧ್ಯತೆ ಇದೆ. ಆ ಪರಿಸ್ಥಿತಿಯಲ್ಲಿ ಅಂಗಡಿ ಮಾಲಕರು ಬಂದ್ ಮಾಡುವುದು ಹೇಗೆ ?

ಒಂದೆರಡು ಗಂಟೆಗಳಲ್ಲಿ ನೂರಾರು ಜನರಿಗೆ ಖರೀದಿ ಮಾಡ ಬೇಕಾಗಿರುವುದರಿಂದ ಉಂಟಾಗುವ ಸಹಜ ನೂಕು ನುಗ್ಗಲಿನಿಂದ ಕೊರೋನಾ ಹರಡುವುದಿಲ್ಲವೇ? ಇಂತಹ ಕರ್ಫ್ಯೂ ಕೊರೋನಾ ನಿಯಂತ್ರಿಸುವಲ್ಲಿ ಎಷ್ಟು ಪರಿಣಾಮ ಬೀರಬಹುದು?

ಎರಡು ದಿನದ ಕರ್ಫ್ಯೂ ಎಂದಮೇಲೆ ಅಲ್ಲಿ ಖರೀದಿಗೆ ಅವಕಾಶ ಇರಬಾರದು ಅದು ಸಂಪೂರ್ಣ ಕರ್ಫ್ಯೂ ಆಗಿರಬೇಕು ಅಗತ್ಯ ವಸ್ತುಗಳನ್ನು ಎರಡು ದಿನ ಮೊದಲೇ ಇಡೀ ದಿನ ಜನರು ಖರೀದಿಸುವಂತಾಗಬೇಕು ಸಂಬಂಧಪಟ್ಟ ಅಧಿಕಾರಿಗಳು ಅದೇಶವನ್ನು ಮರು ಪರಿಶೀಲಿಸಬೇಕಾಗಿರುವುದು ಅನಿವಾರ್ಯವಾಗಿದೆ.

driving
- Advertisement -

Related news

error: Content is protected !!