Sunday, April 28, 2024
spot_imgspot_img
spot_imgspot_img

Western Institute of Martial Arts Mangalore ರಾಜ್ಯ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಪುತ್ತೂರಿನ ಸಹೋದರರಿಬ್ಬರಿಗೆ ಪ್ರಥಮ ಸ್ಥಾನ

- Advertisement -G L Acharya panikkar
- Advertisement -

ಮಂಗಳೂರು: ಜನವರಿ 7ರಂದು ಮಂಗಳೂರಿನಲ್ಲಿ Western Institute of Martial Arts ಇದರ ವತಿಯಿಂದ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಸೆನ್ಸಾಯಿ ಮಾಧವ ಅಳಿಕೆ ಮತ್ತು ರೋಹಿತ್ S.N ರವರ ಶಿಷ್ಯಾಂದಿರಾದ ರಿಶೋನ್ ಲಸ್ರಾದೋ ಮತ್ತು ರಿಯೋನ್ ಲಸ್ರಾದೋ ತಲಾ 3 ಪದಕ ಗಳೊಂದಿಗೆ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.

13ರ ವಯೋಮಾನದಲ್ಲಿ ರಿಶೋನ್ ಲಸ್ರಾದೋ ರವರು ಕಟಾದಲ್ಲಿ ಪ್ರಥಮ, ಕುಮಿಟೆಯಲ್ಲಿ ದ್ವಿತೀಯ ಹಾಗೂ ಗ್ರೂಪ್ ಕಟಾದಲ್ಲಿ ಪ್ರಥಮ ಹೀಗೆ ಮೂರು ಪದಕಗಳನ್ನು ಪಡೆದಿರುತ್ತಾರೆ.

11ರ ವಯೋಮಾನದಲ್ಲಿ ರಿಯೋನ್ ಲಸ್ರಾದೋ ರವರು ಕಟಾದಲ್ಲಿ ಪ್ರಥಮ, ಕುಮಿಟೆಯಲ್ಲಿ ಪ್ರಥಮ ಹಾಗೂ ಗ್ರೂಪ್ ಕಟಾದಲ್ಲಿ ಪ್ರಥಮ ಹೀಗೆ ಮೂರು ಪದಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಈ ಸಹೋದರರಿಬ್ಬರು ಪುತ್ತೂರು ಬೆಥನಿ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿ ಗಳಾಗಿದ್ದು, ಸೋನಿ ವಿಷನ್ ಕೇಬಲ್ ಟಿವಿ & ಬ್ರಾಡ್ ಬ್ಯಾಂಡ್ ಸರ್ವಿಸಸ್ ನ ಮಾಲಕರಾದ ರೋಶನ್ ಮತ್ತು ಸುಶಾಂತಿ ಲಾಸ್ರದೋ ರವರ ಪುತ್ರರಾಗಿರುತ್ತಾರೆ.

ಇವರಿಗೆ ಸೆನ್ಸಾಯಿ ಮಾಧವ ಅಳಿಕೆ, ರೋಹಿತ್ S.N ಮತ್ತು ನಿಖಿಲ್ K.T ಇವರು ವಿಶೇಷ ತರಬೇತಿಯನ್ನು ನೀಡಿರುತ್ತಾರೆ.

- Advertisement -

Related news

error: Content is protected !!