Saturday, May 4, 2024
spot_imgspot_img
spot_imgspot_img

ಚಳಿಗಾಲ ಬಂತು ಎಂದರೆ, ಮನೆಯಲ್ಲಿ ಸಾಸಿವೆ ಎಣ್ಣೆ ಇರಲೇಬೇಕು! ಯಾಕೆ ಗೊತ್ತಾ?

- Advertisement -G L Acharya panikkar
- Advertisement -

ಚಳಿಗಾಲದ ಈ ಸಂದರ್ಭದಲ್ಲಿ ಬೆಳಗಿನ ಸಮಯದಲ್ಲಿ ಹೊರಗೆ ಕಾಲಿಡಲು ಆಗುವುದಿಲ್ಲ. ಅಷ್ಟರ ಮಟ್ಟಿಗೆ ತಣ್ಣಗಿನ ವಾತಾವರಣ ಇರುತ್ತದೆ. ಇದು ಬ್ಯಾಕ್ಟೀರಿಯಾ ಹಾಗೂ ವೈರಸ್ ಸೋಂಕು ತಗುಲಲು ಪೂರಕ ವಾತಾವರಣವಾಗಿರುತ್ತದೆ. ಈ ಸಂದರ್ಭದಲ್ಲಿ ಹಲವಾರು ಕಾಯಿಲೆಗಳು ನಮಗೆ ಕಂಡುಬರುವುದು ಸಹಜ. ಮೆಡಿಕಲ್ ಶಾಪ್ ಗೆ ಹೋದರೆ ಔಷಧಿಗಳು ಸಿಗುತ್ತವೆ ನಿಜ.

ಆದರೆ ಕಾಯಿಲೆ ಬರುವುದಕ್ಕೆ ಮುಂಚೆ ಅದನ್ನು ತಡೆಗಟ್ಟುವುದು ಒಳ್ಳೆಯದಲ್ಲವೇ? ಹಾಗಾಗಿ ಮನೆ ಮದ್ದಿನ ರೂಪದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯಾವುದಾದರು ವಿಧಾನ ಇದೆಯಾ ಎಂದು ನೋಡುವುದಾದರೆ ಅದು ಸಾಸಿವೆ ಎಣ್ಣೆಯಿಂದ ಅನುಕೂಲವಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಹಲವಾರು ಕಾಯಿಲೆಗಳಿಂದ ಇದು ನಮ್ಮನ್ನು ರಕ್ಷಿಸುವುದು ಮಾತ್ರವಲ್ಲದೆ ಮುಂಬರುವ ದಿನಗಳಲ್ಲಿ ನಮ್ಮ ಆರೋಗ್ಯ ಗಂಭೀರ ಸ್ವರೂಪಕ್ಕೆ ತಿರುಗುವುದನ್ನು ತಪ್ಪಿಸುತ್ತದೆ.

ಸಾಸಿವೆ ಎಣ್ಣೆ ತನ್ನಲ್ಲಿ ಒಮೆಗಾ 3 ಫ್ಯಾಟಿ ಆಮ್ಲಗಳನ್ನು ಒಳಗೊಂಡಿದ್ದು, ನಮ್ಮ ದೇಹಕ್ಕೆ ವಿವಿಧ ಬಗೆಯ ಪೌಷ್ಟಿಕಾಂಶಗಳನ್ನು ಕೊಡುವ ಜೊತೆಗೆ ವಿಟಮಿನ್ ಇ ಮತ್ತು ಖನಿಜಾಂಶಗಳನ್ನು ಹೊಂದಿರುತ್ತದೆ. ಜೊತೆಗೆ ಚಳಿಗಾಲದಲ್ಲಿ ಸಾಸಿವೆ ಎಣ್ಣೆ ನಮಗೆ ಒಂದು ಸಾವಯುವ ಔಷಧಿಯಾಗಿ ಕೆಲಸ ಮಾಡುತ್ತದೆ
ಶೀತ ಅಥವಾ ಕೆಮ್ಮು ಸಮಸ್ಯೆ ಇರುತ್ತದೆ ಅಂತಹವರಿಗೆ ಸಾಸಿವೆ ಎಣ್ಣೆ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ. ನಿಮ್ಮ ಎದೆಯ ಮೇಲ್ಭಾ ಗದಲ್ಲಿ ಸಾಸಿವೆ ಎಣ್ಣೆಯ ಕೆಲವು ಹನಿಗಳನ್ನು ಹಚ್ಚಿ ಉಜ್ಜುವುದರಿಂದ ತಕ್ಷಣವೇ ಪರಿಹಾರ ಸಿಗುತ್ತದೆ. ಎದೆಯಲ್ಲಿ ಕಟ್ಟಿದ ಕಫ ಕೂಡ ನಿವಾರಣೆಯಾಗುತ್ತದೆ. ದೇಹ ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಯಾಗಿರುವ ನೀರಿನ ಅಂಶವನ್ನು ಸಹ ಇದು ತೆಗೆದುಹಾಕುತ್ತದೆ.

ತುಂಬಾ ಜನರಿಗೆ ನೆಗಡಿ ಬಂದು ಉಸಿರಾಡಲು ಕಷ್ಟವಾಗುತ್ತಿರುತ್ತದೆ. ಚಳಿಗಾಲದ ಸಂದರ್ಭದಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಮೂಗು ಕಟ್ಟಿಕೊಂಡಿರುತ್ತದೆ. ಅಂತಹವರು ಸಾಸಿವೆ ಎಣ್ಣೆಯಿಂದ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.
ಚೆನ್ನಾಗಿ ಕಾಯಿಸಿದ ನೀರಿಗೆ ಕೆಲವು ಹನಿಗಳಷ್ಟು ಸಾಸಿವೆ ಎಣ್ಣೆ ಹಾಕಿ ಅದರ ಆವಿ ತೆಗೆದುಕೊಳ್ಳುವುದರಿಂದ ಸಾಕಷ್ಟು ಅನುಕೂಲವಾಗುತ್ತದೆ.
ಇದು ಮಾತ್ರವಲ್ಲದೆ ಸಣ್ಣ ಉರಿಯಲ್ಲಿ ಸಾಸಿವೆ ಎಣ್ಣೆಯನ್ನು ಕಾಯಿಸುವ ಸಂದರ್ಭದಲ್ಲಿ ಅದಕ್ಕೆ ಒಂದೆರಡು ಬೆಳ್ಳುಳ್ಳಿ ಸೇರಿಸಿ ಸ್ವಲ್ಪ ಹೊತ್ತು ಹಾಗೆ ಕಾಯಿಸಿ ಉಗುರು ಬೆಚ್ಚಗಿನ ವಾತಾವರಣಕ್ಕೆ ಬಂದ ನಂತರದಲ್ಲಿ ಈ ಎಣ್ಣೆಯ ಕೆಲವು ಹನಿಗಳನ್ನು ರಾತ್ರಿ ಮಲಗುವ ಸಂದರ್ಭದಲ್ಲಿ ಪ್ರತಿ ರಾತ್ರಿ ಮೂಗಿನ ಹೊಳ್ಳೆಗಳಿಗೆ ಬಿಟ್ಟುಕೊಳ್ಳುವುದ ರಿಂದ ತಕ್ಷಣವೇ ಪರಿಹಾರ ಸಿಗುತ್ತದೆ.​

ಸಿವೆ ಎಣ್ಣೆಯಲ್ಲಿ ಒಮೆಗಾ 3, ಒಮೆಗಾ 6 ಅಂಶಗಳು ಇರಲಿದ್ದು, ಮುಖ್ಯವಾಗಿ ನಮ್ಮ ದೇಹದಲ್ಲಿ ರಕ್ತ ಸಂಚಾರಕ್ಕೆ ಅನುಕೂಲ ಮಾಡುವಂತಹ ಅಂಶಗಳು ಇವಾಗಿವೆ. ನಮ್ಮ ರಕ್ತದ ಒತ್ತಡವನ್ನು ನಿಯಂತ್ರಣ ಮಾಡುವುದರ ಮೂಲಕ ನಮ್ಮ ಹೃದಯದ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡುವ ಗುಣ ಇವುಗಳಲ್ಲಿ ಕಂಡು ಬರುತ್ತದೆ. ಹೀಗಾಗಿ ಸಾಸಿವೆ ಎಣ್ಣೆಯನ್ನು ಚಳಿಗಾಲದಲ್ಲಿ ಅಡುಗೆಯಲ್ಲಿ ಬಳಸುವುದರಿಂದ ಹೃದಯದ ಹಾಗೂ ಹೃದಯ ರಕ್ತನಾಳದ ಕಾಯಿಲೆಗಳಿಂದ ನಾವು ಪಾರಾಗಬಹುದು.

ಚಳಿಗಾಲದಲ್ಲಿ ನಿಮಗೆಲ್ಲ ಗೊತ್ತಿರುವ ಹಾಗೆ ಕೈಕಾಲುಗಳು ಹಿಡಿದುಕೊಳ್ಳುವುದು ಸಾಮಾನ್ಯ. ಹೀಗಾಗಿ ಸಾಸಿವೆ ಎಣ್ಣೆಯನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಬಳಸುವುದರಿಂದ ಮೂಳೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳಿಂದ ಸುಲಭವಾಗಿ ಪಾರಾಗಬಹುದು. ಇದಕ್ಕಾಗಿ ನೀವು ಬೆಳ್ಳುಳ್ಳಿ ತೆಗೆದುಕೊಂಡು ಅದನ್ನು ಸಾಸಿವೆ ಎಣ್ಣೆಯಲ್ಲಿ ಹಾಕಿ ಸ್ವಲ್ಪ ಹೊತ್ತು ಬಿಸಿ ಮಾಡಿ ಅದನ್ನು ನಿಮಗೆ ಎಲ್ಲಿ ನೋವು ಕಂಡು ಬರುತ್ತಿದೆ ಅಲ್ಲಿ ಚೆನ್ನಾಗಿ ಮಸಾಜ್ ಮಾಡಿ.

- Advertisement -

Related news

error: Content is protected !!