Monday, June 22, 2026
spot_imgspot_img
spot_imgspot_img

ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಸಿಡಿಲು ಬಡಿದು ನವವಿವಾಹಿತ ಯುವಕ ಮೃತ್ಯು

- Advertisement -
- Advertisement -
vtv vitla

ಮಂಡ್ಯ: ಸಿಡಿಲು ಬಡಿದು ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹರಳಹಳ್ಳಿ ಸರ್ಕಲ್ ಬಳಿ ನಡೆದಿದೆ.

ಮದ್ದೂರಿನ ವೈದ್ಯನಾಥಪುರದ ಮಧು (35) ಎಂಬವರು ಸಿಡಿಲಿನ ಹೊಡೆತಕ್ಕೆ ಸಾವನ್ನಪ್ಪಿದ್ದಾರೆ.

ನಿನ್ನೆ ಮತದಾನ ಮಾಡಿ ಪತ್ನಿಯನ್ನು ತವರಿಗೆ ಬಿಟ್ಟು ಹುಟ್ಟೂರಿಗೆ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಮಧು ಬೈಕ್​ನಲ್ಲಿ ಮನೆಗೆ ಹಿಂತಿರುಗುವ ವೇಳೆ ಜೋರಾಗಿ ಮಳೆ ಸುರಿದಿದೆ. ಮಳೆ ಜೋರಾದ ಹಿನ್ನಲೆ ಬೈಕ್ ನ್ನು ಹರಳಹಳ್ಳಿ ಸರ್ಕಲ್ ಬಳಿ ಮರದಡಿಯಲ್ಲಿ ನಿಲ್ಲಿಸಿ ನಿಂತುಕೊಂಡಿದ್ದನು. ಹೆಲ್ಮೆಟ್ ಧರಿಸಿ, ಪೋನ್ ನಲ್ಲಿ ಹೆಂಡತಿಯೊಂದಿಗೆ ಮಾತನಾಡುತ್ತಿದ್ದಾಗ ಸಿಡಿಲು ಬಡಿದು ಮಧು ಮೃತಪಟ್ಟಿದ್ದಾರೆ.

ಮದ್ದೂರು ತಾಲೂಕಿನ ಹರಳಹಳ್ಳಿ ಸರ್ಕಲ್ ಬಳಿ ಬೈಕ್‌ನಲ್ಲಿ ಹೋಗುವಾಗ ಸಿಡಿಲು ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

- Advertisement -

Related news

error: Content is protected !!