Sunday, June 14, 2026
spot_imgspot_img
spot_imgspot_img

ವಿಟ್ಲ: ಭಾರಿ ಗಾಳಿ ಮಳೆಗೆ ಕೋಳಿ ಸಾಕಾಣೆ ಶೆಡ್ ಕುಸಿತ; 1500 ಕೋಳಿಗಳು ಸಾವು..!

- Advertisement -
- Advertisement -

ವಿಟ್ಲ: ಎಡೆಬಿಡದೆ ಬಂದ ಗಾಳಿ ಮಳೆಗೆ ಕೋಳಿ ಸಾಕಾಣಿಕಾ ಶೆಡ್ ನೆಲಕ್ಕುರುಳಿ ಸುಮಾರು ಒಂದೂವರೆ ಸಾವಿರ ಕೋಳಿಗಳು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ತು ಎಂಬಲ್ಲಿನಡೆದಿದೆ.

ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ತು ನಿವಾಸಿ ರಾಘವ ಎಂಬವರ ಮಾಲಕತ್ವದ ಕೋಳಿ ಶೆಡ್ ಇದಾಗಿದ್ದು. ಸುಮಾರು 2200 ಕೋಳಿಗಳನ್ನು ಅವರು ಸಾಕಾಣೆ ಮಾಡುತ್ತಿದ್ದರು. ಕೋಳಿಗಳು ದೊಡ್ಡದಾಗಿರುವ ಹಿನ್ನೆಲೆಯಲ್ಲಿ ಸುಮಾರು 700 ಕೋಳಿಗಳು ಮಾರಾಟವಾಗಿದ್ದವು.

ಶೆಡ್ಡಿನ ಮೇಲ್ಮಾವಣಿ ಒಮ್ಮೆಲೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಸುಮಾರು 1500 ಕೋಳಿಗಳು ಅದರಡಿಗೆ ಬಿದ್ದು ಸತ್ತು ಹೋಗಿವೆ. ಘಟನೆಯಿಂದಾಗಿ ಶೆಡ್ ಸಂಪೂರ್ಣ ನಾಶವಾಗಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆನ್ನಲಾಗಿದೆ.

- Advertisement -

Related news

error: Content is protected !!