Monday, July 20, 2026
spot_imgspot_img
spot_imgspot_img

ವಿಟ್ಲ: ಪುತ್ತೂರು ಕೋ-ಓಪರೇಟಿವ್ ಟೌನ್‌ ಬ್ಯಾಂಕ್‌ ಲಿ. ಪುತ್ತೂರು ಇದರ ನೂತನ ಶಾಖೆ ಉದ್ಘಾಟನಾ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಪುತ್ತೂರು ಕೋ-ಓಪರೇಟಿವ್ ಟೌನ್‌ ಬ್ಯಾಂಕ್‌ ಲಿ. ಪುತ್ತೂರು ಇದರ ನೂತನ ಶಾಖೆ ವಿಟ್ಲ ಎಂಪಾಯರ್‌ ಮಹಲ್‌ನ ಒಂದನೇ ಮಹಡಿಯಲ್ಲಿ ಕಾರ್ಯಚರಿಸಲು ಮುಂದಾಗಿದ್ದು, ಇದರ ಉದ್ಘಾಟನಾ ಸಮಾರಂಭ ನಡೆಯಿತು.

ನೂತನ ಶಾಖೆಯನ್ನು ವಿಧಾನಪರಿಷತ್ ಸದಸ್ಯರು ಕಿಶೋರ್‌ ಕುಮಾರ್‌ ಪುತ್ತೂರುರವರು ರಿಬ್ಬನ್‌ ಕತ್ತರಿಸಿ ದೀಪ ಬೆಳಗಿಸಿ ಉದ್ಘಾಟಿಸಿ ನೂತನ ಶಾಖೆಗೆ ಶುಭ ಹಾರೈಸಿದರು. ನಂತರ ಭದ್ರತಾಕೋಶ ಹಾಗೂ ಗಣಕಯಂತ್ರವನ್ನು ಉದ್ಘಾಟಿಸಲಾಯಿತು.

ನಂತರ ಎನ್‌ ಕಿಶೋರ್‌ ಕೊಳತ್ತಾಯ, ಅಧ್ಯಕ್ಷರು ಪುತ್ತೂರು ಕೋ-ಓಪರೇಟಿವ್‌ ಟೌನ್‌ಬ್ಯಾಂಕ್‌ ಲಿ. ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಎಸ್‌ ಸತೀಶ್ಚಂದ್ರ ಮಾಜಿ ಅಧ್ಯಕ್ಷರು ಕ್ಯಾಂಪ್ಕೋ ಲಿ., ಕರುಣಾಕರ ನಾಯ್ತೊಟ್ಟು, ಅಧ್ಯಕ್ಷರು ವಿಟ್ಲ ಪಟ್ಟಣ ಪಂಚಾಯತ್‌ ವಿಟ್ಲ, ಮುಖ್ಯ ಅತಥಿಗಳಾಗಿ ಉಪಸ್ಥಿತರಿದ್ದು ನೂತನ ಶಾಖೆಗೆ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಸಹಕಾರಿ ಸಪ್ತಾಹ ಅಂಗವಾಗಿ ಮೊಳಹಳ್ಳಿ ಶಿವರಾಯರ ಭಾವಚಿತ್ರ ಅನಾವರಣಗೊಳಿಸಲಾಯಿತು. ಬಳಿಕ ಫಲಾನುಭವಿಗಳಿಗೆ ಪ್ರಥಮ ಠೇವಣಿ ಹಂಚಲಾಯಿತು.

ಬ್ಯಾಂಕಿನ ನಿರ್ದೇಶಕ ಚಂದ್ರಶೇಖರ ರಾವ್‌ ಬಪ್ಪಳಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಮಾರಿ ಅದ್ವಿಕಾ ಪ್ರಾರ್ಥಿಸಿ, ಬ್ಯಾಂಕಿನ ಉಪಾಧ್ಯಕ್ಷರು ಕೆ ವಿಶ್ವಾಸ್‌ ಶೆಣೈ ಸ್ವಾಗತಿಸಿದರು. ಬ್ಯಾಂಕ್‌ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಶೇಖರ್‌ ಶೆಟ್ಟಿ ಧನ್ಯವಾದವಿತ್ತು, ವಿಟ್ಲ ಶಾಖಾ ಶಾಖಾಧಿಕಾರಿ ಚೇತನ್‌ ಯು.ಎನ್‌ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಆಗಮಿಸಿ ನೂತನ ಶಾಖೆಗೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ನಿರ್ದೇಶಕರುಗಳು- ಸಿಬ್ಬಂದಿಗಳು, ಪಟ್ಟಣ ಪಂಚಾಯತ್‌ ಸದಸ್ಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!