

ವಿಟ್ಲ: ಮಂಗಳೂರು ಬೊಬ್ಬೆಕೇರಿ ರಸ್ತೆಯಲ್ಲಿ ಮೃತ್ಯುಕೂಪದಂತೆ ಬಾಯ್ತೆರೆದು ನಿಂತಿದ್ದ ಹೊಂಡ ಗುಂಡಿಯನ್ನು ಮುಚ್ಚುವಲ್ಲಿ ಕೊನೆಗೂ ಪಿಡಬ್ಲ್ಯೂ ಇಲಾಖೆ ಮುಂದಾಗಿದ್ದು, ವಾಹನ ಸವಾರರ ಪರದಾಟಕ್ಕೆ ಕೊನೆಗೂ ತಾತ್ಕಾಲಿಕ ಮುಕ್ತಿ ಸಿಕ್ಕಾಂತಾಗಿದೆ.

ಕಳೆದ ಕೆಲ ತಿಂಗಳಿನಿಂದ ಕೆಟ್ಟು ನಿಂತಿದ್ದ ಬೊಬ್ಬೆಕೇರಿ ಕರ್ನಾಟಕ ಬ್ಯಾಂಕ್ ನ ಮುಂಬಾಗದ ಪ್ರಮುಖ ರಸ್ತೆಯಲ್ಲಿ ಹೊಂಡ ಗುಂಡಿಗಳು ಬಾಯ್ತೆರೆದು ನಿಂತು ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿತ್ತು. ಅದೆಷ್ಟೋ ವಾಹಗಳು ಸ್ಕಿಡ್ ಆಗಿ ವಾಹನ ಸವಾರರ ಪಾಲಿಗೆ ಈ ಹೊಂಡ ಗುಂಡಿಗಳು ಮೃತ್ಯು ಕೂಪದಂತೆ ಕಾಡುತ್ತಿದ್ದವು.

ಮಳೆ ಬಂದಂರಂತೂ ರಸ್ತೆ ಸಮುದ್ರವಾಗಿ ಬದಲಾಗುತ್ತಿತ್ತು ಈ ರಸ್ತೆ. ಈ ಬಗ್ಗೆ ಎಸ್ಟು ಬಾರಿ ವರದಿ ಮಾಡಿದರೂ ಲೆಕ್ಕಿಸದ ಪಿಡಬ್ಲ್ಯು ಇಲಾಖೆ ನಿನ್ನೆ ಉಕ್ಕುಡ ಅಪ್ಪೇರಿಪಾದೆ ರಸ್ತೆಯಲ್ಲಿ ಎಲ್ಲಾ ವಾಹನ ಸವಾರರು ನಡೆಸಿದ ರಸ್ತೆತಡೆ ಪ್ರತಿಭಟನೆಯ ಬಿಸಿ ಬೊಬ್ಬೆಕೇರಿ ರಸ್ತೆಯ ತನಕವೂ ತಟ್ಟಿದೆ ಎಂಬುವು ಸಾರ್ವಜನಿಕರಲ್ಲಿ ಖುಷಿ ತಂದಿದೆ. ನಿನ್ನೆ ಉಕ್ಕುಡ ಅಪ್ಪೇರಿಪಾದೆಯ ರಸ್ತೆಯಲ್ಲಿ ನಡೆಸಿದ ರಸ್ತೆ ತಡೆ ಪ್ರತಿಭಟನೆಯ ಫಲಶ್ರುತಿಯಾಗಿ ಇಂದು ಬೊಬ್ಬೆಕೇರಿ ರಸ್ತೆಯ ದುರಸ್ಥಿ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಕೊನೆಗೂ ವಾಹನ ಸವಾರರ ಪಾಲಿಗೆ ಮುಕ್ತಿ ಸಿಕ್ಕಂತಾಗಿದೆ.








