Wednesday, April 24, 2024
spot_imgspot_img
spot_imgspot_img

ಇಂದಿನಿಂದ ಚಳಿಗಾಲದ ಅಧಿವೇಶನ ಪ್ರಾರಂಭ

- Advertisement -G L Acharya panikkar
- Advertisement -

ಬೆಂಗಳೂರು: ಕೊರೊನಾ ಕಾಲದಲ್ಲಿ ಇಂದು ಎರಡನೇ ಅಧಿವೇಶನ ಎದುರಿಸಲು ಸರ್ಕಾರ ಸಿದ್ಧವಾಗಿದೆ. ಉಪಚುನಾವಣೆ ಗೆದ್ದ ಹುಮ್ಮಸ್ಸಿನಲ್ಲಿರುವ ಬಿಜೆಪಿಯು ಪ್ರತಿಪಕ್ಷಗಳನ್ನು ಎದುರಿಸಲು ಪ್ರತ್ಯಸ್ತ್ರಗಳನ್ನ ಸಿದ್ಧಪಡಿಸಿಕೊಂಡಿದೆ. ಬೆಳಗಾವಿಯಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿರುವ ಬಿಜೆಪಿ, ಪ್ರಮುಖವಾಗಿ ಎರಡು ಮಸೂದೆಗಳ ಮಂಡನೆಗೆ ಮುಂದಾಗಿದೆ.

ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಮುಗಿಬೀಳಲು ಪ್ರತಿಪಕ್ಷ ಕಾಂಗ್ರೆಸ್​​ ಹಾಗೂ ಜೆಡಿಎಸ್ ಸನ್ನದ್ಧವಾಗಿವೆ. ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ಎರಡು ಸದನಗಳ ಸದಸ್ಯರ ಸಭೆ ಕರೆದು ಹೋರಾಟದ ರೂಪುರೇಷೆಗಳನ್ನ ಸಿದ್ಧಮಾಡಿಕೊಂಡಿದ್ದಾರೆ. ಇನ್ನು, ಜೆಡಿಎಸ್ ಕೂಡಾ ಇಂದು ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆದಿದೆ.

ಅಧಿವೇಶನದಲ್ಲಿ ಈ ಬಾರಿ ಸರ್ಕಾರ ಲವ್ ಜಿಹಾದ್, ಗೋಹತ್ಯೆ ನಿಷೇಧ ವಿಧೇಯಕ ಮಂಡನೆಗೆ ಮುಂದಾಗಿದ್ದು, ಇದನ್ನೇ ವಿಪಕ್ಷಗಳು ಗುರಿಯಾಗಿಸೋ ಸಾಧ್ಯತೆ ಇದೆ. ಇನ್ನು, ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್​​ ಸೂಚನೆ ನೀಡಿದ್ದು, ಸರ್ಕಾರದ ವಿಳಂಬ ಧೋರಣೆಯೂ ಸದನದಲ್ಲಿ ಪ್ರತಿಧ್ವನಿಸೋ ಸಾಧ್ಯತೆ ಇದೆ. ಈ ಮಧ್ಯೆ ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಪ್ರಕರಣ, ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ಹಂಚಿಕೆಯ ಬಗ್ಗೆಯೂ ವಿಪಕ್ಷಗಳು ಪ್ರಸ್ತಾಪಿಸಲಿವೆ.

ಇದಿಂನಿಂದ ಆರಂಭಗೊಳ್ಳಲಿರುವ ಚಳಿಗಾಲದ ಅಧಿವೇಶನ ಡಿಸೆಂಬರ್​​​ 15ರ ವರೆಗೆ ಒಟ್ಟು ಏಳು ದಿನಗಳ ಕಾಲ ನಡೆಯಲಿದೆ.

- Advertisement -

Related news

error: Content is protected !!