Saturday, April 20, 2024
spot_imgspot_img
spot_imgspot_img

ವಿಶ್ವದ ಉತ್ತಮ ಛಾಯಾಗ್ರಹಣ ಪ್ರಶಸ್ತಿ ಪಡೆದ ಐಶ್ವರ್ಯ !!

- Advertisement -G L Acharya panikkar
- Advertisement -

ಮುಂಬೈ, :ಭಾರತೀಯ ಛಾಯಾಗ್ರಹಣ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಭಾರತೀಯ ಹೆಣ್ಣು ಮಗಳು ವೈಲ್ಡ್ ಲೈಫ್ ಫೋಟೋಗ್ರಾಫರ್ ಆಫ್ ದಿ ಇಯರ್” ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮುಂಬೈ ಯ ಐಶ್ವರ್ಯ ಶ್ರೀಧರ್ ಭಾರತ ದೇಶವೇ ಹೆಮ್ಮೆ ಪಡುವಂತಹ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಳೆದ 56 ವರ್ಷಗಳಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು, ಇದೇ ಮೊದಲಿಗೆ ಭಾರತೀಯ ಮಹಿಳೆಯ ಮುಡಿಗೇರಿದೆ.

ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ಪ್ರಶಸ್ತಿ ಆಯ್ಕೆಯನ್ನು ಘೋಷಣೆ ಮಾಡಲಾಗಿತ್ತು. ವಿಶ್ವದ 80 ಕ್ಕೂ ಹೆಚ್ಚು ದೇಶಗಳ 50,000 ಛಾಯಾಗ್ರಾಹಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಪೈಕಿ, ನೂರು ಮಂದಿಯನ್ನು ಆಯ್ಕೆ ಮಾಡಿ ಪ್ರಶಸ್ತಿಗೆ ಪರಿಗಣಿಸಲಾಗಿತ್ತು.

ನೂರು ಛಾಯಾಚಿತ್ರಗಳಲ್ಲಿ ಐಶ್ವರ್ಯ ಕ್ಲಿಕ್ಕಿಸಿದ್ದ ಚಿತ್ರವನ್ನು ಆಯ್ಕೆ ಮಾಡಲಾಗಿದ್ದು ಅವರ ಚಿತ್ರಕ್ಕೆ ‘ ಲೈಟ್ಸ್ ಆಫ್ ಫ್ಯಾಶನ್’ ಎಂದು ಹೆಸರಿಸಲಾಗಿದೆ. ಈ ಚಿತ್ರವನ್ನು ಐಶ್ವರ್ಯ ಕ್ಯಾನನ್ ಕ್ಯಾಮರಾ ಬಳಸಿ ಸೆರೆಹಿಡಿದಿದ್ದಾರೆ.

ಕನ್ಸ್ಯೂಮರ್ ಸಿಸ್ಟಮ್ ಪ್ರಾಡಕ್ಟ್ಸ್ ಅಂಡ್ ಇಮೇಜಿಂಗ್ ಕಮ್ಯುನಿಕೇಶನ್ಸ್ ನಿರ್ದೇಶಕ ಸುಕುಮಾರನ್ ಮಾತನಾಡಿ, ಇದು ಕ್ಯಾನನ್ ಗೆ ಹೆಮ್ಮೆಯ ದಿನವಾಗಿದೆ, ಏಕೆಂದರೆ ಪ್ರಶಸ್ತಿ ಗೆದ್ದ ಚಿತ್ರವನ್ನು ಎಒಎಸ್-1ಡಿ ಕ್ಯಾಮರಾ ಬಳಸಿ ಚಿತ್ರೀಕರಿಸಲಾಗಿದೆ ಮತ್ತು ಈ ಕ್ಯಾಮೆರಾದ ಹೃದಯಭಾಗದಲ್ಲಿ ಕ್ಯಾನನ್ ಅಭಿವೃದ್ಧಿಪಡಿಸಿದ ಸಿಮೋಸ್ ಸೆನ್ಸೋರ್ ಚಿತ್ರದ ಗುಣಮಟ್ಟವನ್ನು ಸೂಚಿಸುತ್ತದೆ. ಇದು ಪ್ರತಿಭೆಗಳನ್ನು ಬೆಳೆಸುವ ಮತ್ತು ಉತ್ತೇಜಿಸುವ ಜೊತೆಗೆ ದೇಶದಲ್ಲಿ ಛಾಯಾಗ್ರಹಣ ಸಂಸ್ಕೃತಿಯನ್ನು ಪ್ರಚಾರ ಮಾಡುವ ಕ್ಯಾನನ್ ಅವರ ಬದ್ಧತೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.

- Advertisement -

Related news

error: Content is protected !!