Thursday, June 18, 2026
spot_imgspot_img
spot_imgspot_img

ಅನುಮಾನಸ್ಪದವಾಗಿ ವಿವಾಹಿತ ಮಹಿಳೆ ಸಾವು;ಪತಿಯೇ ಸಾಯಿಸಿರಬಹುದೆಂಬ ಶಂಕೆ

- Advertisement -
- Advertisement -

ಅನುಮಾನಸ್ಪದವಾಗಿ ವಿವಾಹಿತ ಮಹಿಳೆ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ನರಸೀಪುರ ಗ್ರಾಮದಲ್ಲಿ ನಡೆದಿದೆ. ಕಲಾವತಿ(26) ಮೃತ ಮಹಿಳೆ. ಇನ್ನು ಪತಿ ಸೋಮಶೇಖರ್ ಎಂಬಾತನ  ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪತ್ನಿ ಕಲಾವತಿಯನ್ನು ಕೊಲೆ ಮಾಡಿದ್ದಾನೆ ಎಂದು ಮೃತ ಮಹಿಳೆ ಕುಟುಂಬಸ್ಥರು ಆರೋಪಿಸಿದ್ದಾರೆ. ಮನೆ ಪಕ್ಕದ ಶೆಡ್​ನಲ್ಲಿ ಸೋಮಶೇಖರ್ ಅನ್ಯ ಸ್ತ್ರೀಯನ್ನು ತಂದಿಟ್ಟುಕೊಂಡಿದ್ದನಂತೆ. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ ಗಲಾಟೆ ನಡೆಯುತ್ತಿದ್ದು, ಈ ಹಿನ್ನಲೆ ಪತಿ ಸೋಮಶೇಖರ್​ ಪತ್ನಿಯನ್ನು ಬಾವಿಗೆ ತಳ್ಳಿ ಕೊಲೆಗೈದಿದ್ದಾನೆ ಎಂದು ಆರೋಪಿಸಲಾಗಿದೆ.

ಪತ್ನಿಯ ಅಂತ್ಯಸಂಸ್ಕಾರಕ್ಕೆ ಪತಿ ಸೋಮಶೇಖರ್​ ಬಂದಿಲ್ಲ. ಕಾದು ಸುಸ್ತಾದ ಗ್ರಾಮಸ್ಥರು ಶವವನ್ನು ಮನೆಯ ಎದುರೇ ಇಟ್ಟು, ತಮ್ಮ ಮನೆಯ ಕಡೆ ನಡೆದಿದ್ದಾರೆ. ಪತಿಯ ಅಕ್ರಮ ಸಂಭಂಧಕ್ಕೆ ಪತಿಯೇ ಹೆಂಡತಿಯನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

- Advertisement -

Related news

error: Content is protected !!