Saturday, May 4, 2024
spot_imgspot_img
spot_imgspot_img

ಸಿಲಿಂಡರ್ ಸ್ಫೋಟಗೊಂಡು ಮಹಿಳೆ ಮೃತ್ಯು..!

- Advertisement -G L Acharya panikkar
- Advertisement -

ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು ಓರ್ವ ಮಹಿಳೆ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆ ಲಕ್ಷ್ಮಮ್ಮ (38) ಗಾಯಗೊಂಡವರು ರೇಣುಕಮ್ಮ ಮತ್ತು ರಚನಾ ಎಂದು ಗುರುತಿಸಲಾಗಿದೆ.

ಹೊಳಲ್ಕೆರೆ ತಾಲೂಕಿನ ಹೊಸಹಳ್ಳಿಯಲ್ಲಿ ಈ ಅವಘಡ ಸಂಭವಿಸಿದ್ದು,ರೇಣುಕಮ್ಮ ಮತ್ತು ರಚನಾ ಎಂಬುವರಿಗೆ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಮೇಶ್ ಎಂಬುವರ ಬೀದಿ ಬದಿ ಹೋಟೆಲ್​​ಗೆ ಬೆಂಕಿ ಬಿದ್ದಿತ್ತು. ಬೆಂಕಿ ಬಿದ್ದ ವಿಚಾರ ತಿಳಿಯುತ್ತಿದ್ದಂತೆ, ಸುತ್ತಮುತ್ತಲಿದ್ದ ಮಹಿಳಾ ಕಾರ್ಮಿಕರು ಬೀದಿ ಬದಿ ಹೋಟೆಲ್​​ನತ್ತ ಧಾವಿಸಿದ್ದಾರೆ. ಈ ವೇಳೆ ಹೋಟೆಲ್​​ನಲ್ಲಿದ್ದ ಸಿಲಿಂಡರ್​ ಸ್ಪೋಟಗೊಂಡಿದೆ. ಸಿಲಿಂಡರ್​ ಸ್ಪೋಟದಿಂದ ಸ್ಥಳದಲ್ಲಿದ್ದ ಮಹಿಳಾ ಕಾರ್ಮಿಕ ಲಕ್ಷ್ಮಮ್ಮ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

- Advertisement -

Related news

error: Content is protected !!