Sunday, June 14, 2026
spot_imgspot_img
spot_imgspot_img

ಹೆರಿಗೆ ವೇಳೆ ಮಹಿಳೆ ಮೃತ್ಯು..!!

- Advertisement -
- Advertisement -

ಹೆರಿಗೆ ವೇಳೆ ಮಹಿಳೆ ಸಾವನ್ನಪ್ಪಿದ್ದ ಘಟನೆ ಕಣ್ಣೂರಿನಲ್ಲಿ ನಡೆದಿದೆ. ಪಯ್ಯನ್ನೂರು ಕನೈ ಕಾನಂ ನಿವಾಸಿ ಸನುಪ್ ಅವರ ಪತ್ನಿ ಲಿಬಿಶಾ (21) ಮೃತಪಟ್ಟವರು.ಕಣ್ಣೂರು ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಲಿಬಿಶಾಗೆ ಚೊಚ್ಚಲ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ಮಹಿಳೆ ಸಾವನ್ನಪ್ಪಿದ್ದಾರೆ. ಹೆರಿಗೆ ವೇಳೆ ಆರೋಗ್ಯ ಹದಗೆಟ್ಟಿದ್ದರಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಲಿಬಿಶಾ ಪರಿಯಾರಂ ಪಣಂಗಾಟೂರಿನ ಭಾಸ್ಕರನ್ ಮತ್ತು ಲತಾ ದಂಪತಿಯ ಪುತ್ರಿ. ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಸಂಬಂಧಿಕರು ಥಳಿಪರಂ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!