Friday, October 16, 2026
spot_imgspot_img
spot_imgspot_img

ಕಡಬ: ಇಲಿ ಪಾಷಾಣ ಸೇವಿಸಿದ್ದ ಮಹಿಳೆ ಮೃತ್ಯು!

- Advertisement -
- Advertisement -

ಕಡಬ: ಇಲಿ ಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ಕಡಬ ತಾಲೂಕಿನ ಎಣ್ಮೂರಿನ ಮಹಿಳೆಯೊಬ್ಬರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಎಣ್ಮೂರು ಗ್ರಾಮದ ಕಟ್ಟ ಕಾಲನಿ ನಿವಾಸಿ ಪ್ರವೀಣ್ ಎಂಬವರ ಪತ್ನಿ ಶ್ವೇತಾ(22) ಎಂಬವರು ಮೃತ ಮಹಿಳೆ.

ಎ.26 ರಂದು ಮನೆಯಲ್ಲಿ ಇಲಿ ಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಅಲ್ಲಿಂದ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮೇ.5 ರಂದು ನಿಧನರಾಗಿದ್ದಾರೆ. ಮೃತರು ಪತಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

- Advertisement -

Related news

error: Content is protected !!