Sunday, August 23, 2026
spot_imgspot_img
spot_imgspot_img

ಒಂದೇ ಕುಟುಂಬದ ನಾಲ್ವರ ದುರ್ಮರಣ ಪ್ರಕರಣಕ್ಕೆ ಟ್ವಿಸ್ಟ್ – ಸಾವಿಗೆ ಕಲ್ಲಂಗಡಿ ಸೇವನೆ ಕಾರಣ ಅಲ್ಲ ಎಂದ FDA- ಸೋಂಕು – ವಿಷ ಪ್ರಾಶನ ಶಂಕೆ

- Advertisement -
- Advertisement -

ಮುಂಬೈ: ಭೇಂಡಿ ಬಝಾರ್‌ ನ ಡೋಕಾಡಿಯಾ ಕುಟುಂಬದ ನಾಲ್ವರ ಸಾವಿನ ಪ್ರಕರಣದಲ್ಲಿ ಆಹಾರ ಕಲಬೆರಕೆ ಶಂಕೆಗೆ ತೆರೆ ಬಿದ್ದಿದ್ದು ಕಲ್ಲಂಗಡಿಯಲ್ಲಿ ಕೃತಕ ಸೇರ್ಪಡೆ ಪತ್ತೆಯಾಗಿಲ್ಲ ಎಂದು ಎಫ್‌ಡಿಎ ತಿಳಿಸಿದೆ. ರವಿವಾರ ರಾತ್ರಿ ನಡೆದ ಘಟನೆಗೆ ಸಂಬಂಧಿಸಿದಂತೆ ಆರಂಭಿಕ ತನಿಖೆಯಲ್ಲಿ ಆಹಾರ ಕಲಬೆರಕೆಯ ಸಾಧ್ಯತೆ ಮೇಲೆ ಶಂಕೆ ವ್ಯಕ್ತವಾಗಿತ್ತು. ಆದರೆ ಮನೆಯಿಂದ ಸಂಗ್ರಹಿಸಿದ ಆಹಾರ ಮಾದರಿಗಳ ಪರಿಶೀಲನೆಯಲ್ಲಿ ಕೃತಕ ಸಿಹಿಕಾರಕಗಳು ಅಥವಾ ಬಣ್ಣಗಳಂತಹ ಸೇರ್ಪಡೆಗಳ ಲಕ್ಷಣಗಳು ಕಂಡುಬಂದಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.ಆದರೆ ಪರೀಕ್ಷೆಗಳಿಗೆ ಮಿತಿಗಳಿವೆ. ಬ್ಯಾಕ್ಟೀರಿಯಾ ಪರೀಕ್ಷೆ ನಡೆಸಲಾಗಿಲ್ಲ; ಆದ್ದರಿಂದ ಸೋಂಕಿನ ಸಾಧ್ಯತೆಯನ್ನು ತಳ್ಳಿಹಾಕಿಲ್ಲ.

ಜೊತೆಗೆ, ವಿಷಕಾರಿ ಪದಾರ್ಥಗಳ ಸಾಧ್ಯತೆಯನ್ನೂ ನಿರಾಕರಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆಹಾರದಲ್ಲಿ ಸಾಮಾನ್ಯವಾಗಿ ಕಲಬೆರಕೆಗೆ ಬಳಸುವ ರಾಸಾಯನಿಕಗಳಿದೆಯೇ ಎಂಬುದನ್ನು ಪರೀಕ್ಷೆಗಳು ತಿಳಿಸುತ್ತವೆ ಎಂದು ಎಫ್‌ಡಿಎ ಅಧಿಕಾರಿಗಳು ಹೇಳಿದ್ದಾರೆ. ಕಲ್ಲಂಗಡಿಯಲ್ಲಿ ಕೃತಕ ಬಣ್ಣ ಅಥವಾ ಸಿಹಿಕಾರಕ ಬಳಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಇತರೆ ಎಲ್ಲಾ ಆಹಾರ ಮಾದರಿಗಳು ಗುಣಮಟ್ಟದವಾಗಿವೆ ಎಂದು ವರದಿ ಹೇಳಿದೆ. ನೀರಿನ ಮಾದರಿಗಳ ಫಲಿತಾಂಶ ಸ್ಪಷ್ಟವಾಗಿಲ್ಲ; ಪ್ರಮಾಣ ಕಡಿಮೆ ಇದ್ದುದರಿಂದ ಸಂಪೂರ್ಣ ಪರೀಕ್ಷೆ ಸಾಧ್ಯವಾಗಿಲ್ಲ. ಮಾಂಸದ ಮಾದರಿಯನ್ನು ಪ್ರೋಟೀನ್ ವಿಶ್ಲೇಷಣೆಗೆ ಬಿಎಂಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಸಾವುಗಳ ನಿಖರ ಕಾರಣ ವಿಧಿವಿಜ್ಞಾನ ವರದಿಯಲ್ಲಿ ತಿಳಿಯುವ ನಿರೀಕ್ಷೆಯಿದೆ. ಆಹಾರ ಮಾದರಿಗಳನ್ನು ವಿಧಿವಿಜ್ಞಾನ ತಂಡ ಹಾಗೂ ಎಫ್‌ಡಿಎಗೆ ವಿಂಗಡಿಸಲಾಗಿದೆ. ಈ ಮಾದರಿಗಳಲ್ಲಿ ಸೋಂಕು ಅಥವಾ ವಿಷಾಂಶಗಳಿಗಾಗಿ ಪರಿಶೀಲನೆ ನಡೆಯುತ್ತಿದೆ.ಸಂಗ್ರಹಿಸಿದ ಮಾದರಿಗಳಲ್ಲಿ ಹಣ್ಣು, ಅರ್ಧ ತಿಂದ ಖರ್ಜೂರ, ದಾಲ್ಚಿನ್ನಿ ಪುಡಿ ಮಿಶ್ರಿತ ನೀರು ಸೇರಿವೆ. ಜೊತೆಗೆ ಪಲಾವ್–ಬಿರಿಯಾನಿ, ಹಸಿ ಅಕ್ಕಿ ಮತ್ತು ಮಸಾಲೆಗಳನ್ನೂ ಪರೀಕ್ಷೆಗೆ ತೆಗೆದುಕೊಳ್ಳಲಾಗಿದೆ.

ಮೃತರನ್ನು ಅಬ್ದುಲ್ಲಾ ಡೋಕಾಡಿಯಾ (44), ಅವರ ಪತ್ನಿ ನಸ್ರೀನ್ (35), ಪುತ್ರಿಯರಾದ ಆಯೇಷಾ (16) ಮತ್ತು ಜೈನಾಬ್ (12) ಎಂದು ಗುರುತಿಸಲಾಗಿದೆ. ಮೃತರ ಒಳಾಂಗಗಳು ಮತ್ತು ಹೊಟ್ಟೆಯಿಂದ ಪಡೆದ ಮಾದರಿಗಳನ್ನು ಕಲಿನಾ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.“ಪರೀಕ್ಷೆಗಳ ಫಲಿತಾಂಶಗಳನ್ನು ವಿವಿಧ ವಿಷಗಳ ಮಾಹಿತಿಯೊಂದಿಗೆ ಹೋಲಿಸಿ ಪರಿಶೀಲಿಸಲಾಗುತ್ತದೆ”, ಎಂದು ಹಿರಿಯ ವಿಧಿವಿಜ್ಞಾನ ತಜ್ಞರು ತಿಳಿಸಿದ್ದಾರೆ.

- Advertisement -

Related news

error: Content is protected !!