Thursday, April 25, 2024
spot_imgspot_img
spot_imgspot_img

ರಥೋತ್ಸವದ ವೇಳೆ ಉರುಳಿ ಬಿದ್ದ ರಥದ ಮೇಲ್ಭಾಗ: ಐವರು ಭಕ್ತರಿಗೆ ಗಂಭೀರ ಗಾಯ, ಓರ್ವನ ಸ್ಥಿತಿ ಚಿಂತಾಜನಕ!

- Advertisement -G L Acharya panikkar
- Advertisement -

ಯಾದಗಿರಿ: ರಥೋತ್ಸವ ವೇಳೆ ರಥದ ಮೇಲ್ಭಾಗ ಉರುಳಿ ಬಿದ್ದ ಘಟನೆ ಯಾದಗಿರಿ ತಾಲೂಕಿನ ಬಳಿ ಚಕ್ರದಲ್ಲಿ ನಡೆದಿದೆ. ಐವರು ಭಕ್ತರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಭಕ್ತನ ಸ್ಥಿತಿ ಚಿಂತಾಜನಕವಾಗಿದೆ.

ಕೊರೊನಾ ಭೀತಿ ಹಿನ್ನೆಲೆ ಜಾತ್ರೆ ಮತ್ತು ರಥೋತ್ಸವಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಜಿಲ್ಲಾಡಳಿತದ ನಿಷೇಧದ ನಡುವೆಯೂ ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದ ಆರಾಧ್ಯ ದೈವ ಆತ್ಮಲಿಂಗೇಶ್ವರ ರಥೋತ್ಸವಕ್ಕೆ ಗ್ರಾಮಸ್ಥರು ಮುಂದಾಗಿದ್ದರು. ಜಿಲ್ಲಾಡಳಿತ ಆದೇಶಕ್ಕೆ ಲೆಕ್ಕಿಸದೆ ಗ್ರಾಮಸ್ಥರು, ನೂರಾರು ಜನ ಸೇರಿ ರಥವನ್ನು ಎಳೆಯಲು ಮುಂದಾಗಿದ್ದಾರೆ.

ರಭಸವಾಗಿ ರಥ ಎಳೆಯುವಾಗ ರಥ ಏಕಾಏಕಿ ಮೇಲ್ಭಾಗ ಅರ್ಧಕ್ಕೆ ಕಟ್ ಆಗಿ ಭಕ್ತರ ಮೇಲೆ ಉರುಳಿದೆ. ಕಬ್ಬಿಣದ ರಥ ಎಳೆಯುತ್ತಿದ್ದ ಭಕ್ತರ ಮೇಲೆ ಬಿದ್ದ ಪರಿಣಾಮ, ಭಕ್ತರ ಕೈ-ಕಾಲುಗಳು ಕಟ್ ಆಗಿವೆ. ಸದ್ಯ ಗಾಯಾಳು ಭಕ್ತರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೈದಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ನಡೆದಿದೆ.

- Advertisement -

Related news

error: Content is protected !!