Saturday, April 20, 2024
spot_imgspot_img
spot_imgspot_img

ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ: ಅಂಗಾಂಗ ಮುಟ್ಟಿ, ಕಬ್ಬಿನ ಜಲ್ಲೆಯಿಂದ ಹಲ್ಲೆ – ಹನಿಟ್ರ‍್ಯಾಪ್ ಸೇಡಿನ ಶಂಕೆ

- Advertisement -G L Acharya panikkar
- Advertisement -

ಯಾದಗಿರಿ: ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್‌ನ ನಂತರ ಮತ್ತದೇ ಅಂತಹದ್ದೇ ಸುದ್ದಿ ಯಾದಗಿರಿಯಲ್ಲಿ ಕೇಳಿಬಂದಿದೆ. ನಾಲ್ಕೈದು ದುಷ್ಕರ್ಮಿಗಳ ಗುಂಪೊಂದು ಮಹಿಳೆಯ ಮೇಲೆ ಪೈಶಾಚಿಕ ಕೃತ್ಯ ಮೆರೆದಿದ್ದಾರೆ ಎನ್ನಲಾಗಿದೆ. ಇದೊಂದು ಎಂಟು ತಿಂಗಳ ಹಿಂದಿನ ವೀಡಿಯೋ ಎಂದು ತಿಳಿದುಬಂದಿದ್ದು ಇಬ್ಬರನ್ನು ಬಂಧನಕ್ಕೆ ಒಳಪಡಿಸಲಾಗಿದೆ.

ಯಾದಗಿರಿ -ಶಹಾಪುರ ಮಾರ್ಗದ ಹೆದ್ದಾರಿ ಬಳಿಯ ಜಮೀನೊಂದರಲ್ಲಿ ರಾತ್ರಿ ವೇಳೆ ಮಹಿಳೆಯನ್ನು ಬೆತ್ತಲೆಗೊಳಿಸಿ ಕಬ್ಬಿನ ಜಲ್ಲೆಯಿಂದ ಹಲ್ಲೆ ಮಾಡಲಾಗಿದ್ದು, ಹಲ್ಲೆಕೋರರೇ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ. ಹಲ್ಲಕೋರರು ಅಂಗಾಂಗಗಳನ್ನು ಮುಟ್ಟಿ ವಿಕೃತವಾಗಿ ವರ್ತಿಸಿದ್ದಾರೆ. ಈ ಕೃತ್ಯದ ವಿಡಿಯೋ ವೈರಲ್ ಆಗಿದ್ದು ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಲ್ಲೆಗೆ ಕಾರಣ ಅಸ್ಪಷ್ಟ! ಮಹಿಳೆ ಹನಿಟ್ರ‍್ಯಾಪ್ ನಲ್ಲಿ ಭಾಗಿಯಾದ ಶಂಕೆ

ಹಲ್ಲೆ ನಡೆಸಿದವರು ಯಾರು? ಹಲ್ಲೆಗೊಳಗಾದ ಮಹಿಳೆ ಯಾರು ಎಂಬುದು ಗೊತ್ತಾಗಿಲ್ಲ. ಇನ್ನು ಈ ಕುರಿತಾಗಿ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿಲ್ಲ. ಮಹಿಳೆ ಹನಿಟ್ರ‍್ಯಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವಿದ್ದು, ಆಕೆಗೆ ಮೊಬೈಲ್ ತೋರಿಸುತ್ತಾ ಇದರಲ್ಲಿರುವುದು ನೀನೇ ಅಲ್ಲವೇ ಎಂದು ಕೇಳಿ ಹಲ್ಲೆ ನಡೆಸಲಾಗಿದೆ. ಈ ಪೈಶಾಚಿಕ ಕೃತ್ಯದ ವಿಡಿಯೋ ವೈರಲ್ ಆಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿದೆ.

- Advertisement -

Related news

error: Content is protected !!