Thursday, March 28, 2024
spot_imgspot_img
spot_imgspot_img

ಕೇಶವಾನಂದ ಸ್ವಾಮೀಜಿ ನಿಧನಕ್ಕೆ ಒಡಿಯೂರು ಶ್ರೀ ಸಂತಾಪ

- Advertisement -G L Acharya panikkar
- Advertisement -

ವಿಟ್ಲ: ಕಾಸರಗೋಡು ಜಿಲ್ಲೆಯ ಸಾಂಸ್ಕೃತಿಕ ಲೋಕಕ್ಕೆ ಹೊಸ ಆಯಾಮ ನೀಡಿದ ಸಂತ ಜಗದ್ಗುರು ಶಂಕರಾಚಾರ್ಯ ತೋಟಕಾಚಾರ್ಯ ಪರಂಪರೆಯ ಎಡನೀರು ಮಠಾಧೀಶರಾದ ಕೇಶವಾನಂದ ಭಾರತೀ ಸ್ವಾಮೀಜಿಯವರು ವಿಷ್ಣ್ವೈಕ್ಯರಾದುದರ ಬಗ್ಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.


ಒಡಿಯೂರು ಶ್ರೀ ಸಂಸ್ಥಾನದ ಅವಿನಾಭಾವ ಸಂಬಂಧವಿರಿಸಿದ್ದ ಎಡನೀರು ಶ್ರೀಗಳವರು ಧಾರ್ಮಿಕ, ಸಾಂಸ್ಕೃತಿಕ ರಂಗದ ಹರಿಕಾರರಾಗಿ ಯಕ್ಷಗಾನ ಸಂಗೀತದ ಬಗ್ಗೆ ಅಪಾರ ಪ್ರೀತಿ ಇರಿಸಿ ಸ್ವತಃ ಭಾಗವತಿಕೆ ಮಾಡುತ್ತಿದ್ದರು. ಹಾಡುಗಾರರೂ ಆಗಿದ್ದರು. ಯಕ್ಷಗಾನ, ಸಂಗೀತ ಕ್ಷೇತ್ರದಲ್ಲಿ ಕಾಸರಗೋಡು ಜಿಲ್ಲೆಗೆ ಎಡನೀರು ಮಠದ ಕೊಡುಗೆ ಅಪಾರ. ಎಡನೀರು ಮಠವನ್ನು ಕನ್ನಡ ಸಂಸ್ಕೃತಿಯ ಕೇಂದ್ರವಾಗಿಸಿದರು. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲೂ ಎಡನೀರು ಶ್ರೀಗಳವರ ಹೆಸರು ಸರ್ವಕಾಲಕ್ಕೂ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!