Thursday, March 28, 2024
spot_imgspot_img
spot_imgspot_img

ಎಸೆಸೆಲ್ಸಿ ಮರುಮೌಲ್ಯಮಾಪನ : 12 ಅಂಕ ಅಧಿಕ.ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲೂ ಸೈ ಈ ಸ್ಪೂರ್ತಿ ರೈ

- Advertisement -G L Acharya panikkar
- Advertisement -

ವಿಟ್ಲ : ಪ್ರತಿಭಾನ್ವಿತ ವಿದ್ಯಾರ್ಥಿನಿ ಸ್ಪೂರ್ತಿ ರೈ ಅವರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡರಲ್ಲೂ ಸೈ ಎನಿಸಿಕೊಂಡು ತನ್ನ ಹೆತ್ತವರಿಗೂ ತಾನು ಕಲಿತ ಶಾಲೆಗೂ ಕೀರ್ತಿ ಪಡೆದಿದ್ದಾರೆ.ಈಕೆ ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಲ್ಲಿ 609 ಅಂಕ ಗಳಿಸಿ, ಎ ಪ್ಲಸ್ ಸ್ಥಾನ ಪಡೆದಿದ್ದಾರೆ. ಫಲಿತಾಂಶ ಪ್ರಕಟವಾಗುವಾಗ ಈಕೆಗೆ 597 ಅಂಕ ಬಂದಿತ್ತು. ಮರುಮೌಲ್ಯಮಾಪನ ಮಾಡಿದಾಗ ಎರಡು ವಿಷಯಗಳಲ್ಲಿ ಈಕೆಗೆ ಒಟ್ಟು 12 ಅಂಕ ಹೆಚ್ಚು ಬಂದಿದೆ.

ಈಕೆ ವಿಟ್ಲದ ಎಂಜಿನಿಯರ್ ಭಾಸ್ಕರ ರೈ ಮತ್ತು ಶಾರದಾ ಬಿ. ರೈ ದಂಪತಿಯ ಪುತ್ರಿ. ವಿಟ್ಲ ಬಸವನಗುಡಿ ವಿಠಲ್ ಜೇಸೀಸ್ ಆಂಗ್ಲ‌ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ.ಶಟಲ್ ಬ್ಯಾಡ್ಮಿಂಟನ್ ಎಂದರೆ ಈಕೆಗೆ ಎಲ್ಲಿಲ್ಲದ ಪ್ರೀತಿ. ಈಕೆ ಚಿಕ್ಕಂದಿನಲ್ಲೇ ಶಟಲ್ ಬ್ಯಾಡ್ಮಿಂಟನ್ ಆಡುವುದಕ್ಕೆ ಆರಂಭಿಸಿದ್ದಾರೆ. 2015ರಲ್ಲಿ ಉಡುಪಿಯಲ್ಲಿ ಖೇಲೋ ಇಂಡಿಯ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಡೆಸಿದ 14 ವರ್ಷದ ಒಳಗಿನ ಹುಡುಗಿಯರ ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

2017ರಲ್ಲಿ ಬೆಳಗಾಂನಲ್ಲಿ ನಡೆದ 14 ವರ್ಷದ ಒಳಗಿನ ಹುಡುಗಿಯರ ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಕಂಚಿನ ಪದಕ ಪಡೆದಿದ್ದಾರೆ.2018ರಲ್ಲಿ ಮೈಸೂರಿನಲ್ಲಿ ನಡೆದ 14 ವರ್ಷದ ಒಳಗಿನ ಹುಡುಗಿಯರ ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಕಂಚಿನ ಪದಕ ಪಡೆದಿದ್ದಾರೆ.

2019ರಲ್ಲಿ ಮಧ್ಯಪ್ರದೇಶದಲ್ಲಿ ನಡೆದ 17 ವರ್ಷದ ಒಳಗಿನ ಹುಡುಗಿಯರ ರಾಷ್ಟ್ರ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.ಪಠ್ಯೇತರ ಚಟುವಟಿಕೆಗಳಲ್ಲಿ ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟಗಳಲ್ಲಿ ನಿರಂತರವಾಗಿ ಭಾಗವಹಿಸಿದ್ದರೂ ಈಕೆ ಓದಿನಲ್ಲಿ ಮುಂದಿದ್ದರು ಎನ್ನುವುದಕ್ಕೆ ಇದೇ ಸಾಕ್ಷಿ. ಕೊರೊನಾ ಭೀತಿಯ ಲಾಕ್ಡೌನ್ ನಲ್ಲಿ ಕೂಡಾ ಈಕೆ ಓದುತ್ತ, ಆಡುತ್ತ ತನ್ನ ಕೀರ್ತಿ ಪತಾಕೆಯನ್ನು ಹಾರಿಸಿದ್ದು, ಹೆತ್ತವರಿಗೆ, ಶಾಲೆಗೆ, ಊರಿಗೆ ಕೀರ್ತಿ ತಂದಿದ್ದಾರೆ. ಅವರ ಸಾಧನೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

- Advertisement -

Related news

error: Content is protected !!