
ಮುಂದಿನ ವರ್ಷ ಅದ್ದೂರಿ ಯಕ್ಷ ಜಾತ್ರೆ ನಡೆಸುವುದೆಂದು ತೀರ್ಮಾನಿಸಲಾಗಿದೆ:- ಪ್ರಕಾಶ್ ರೈ ಕಲ್ಲಂಗಳ


ಕೇಪು: ಯಕ್ಷಮಿತ್ರರು ಕೇಪು-ಅಳಿಕೆ ಇದರ ಆಶ್ರಯದಲ್ಲಿ 2019ರ ವರೆಗೆ ದಿ.ಅಶೋಕ ಇರಾಮೂಲೆ ಅವರ ಮುತುವರ್ಜಿಯಿಂದ ನಡೆಯುತ್ತಿದ್ದ ಯಕ್ಷೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಅನಿವಾರ್ಯ ಕಾರಣಗಳಿಂದ ಸ್ಥಗಿತಗೊಂಡಿದ್ದ ಈ ಯಕ್ಷ ಜಾತ್ರೆಯು ನ.30ರಂದು ಕೇಪು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ಯಕ್ಷಗಾನ ಹಾಗೂ ಸೇವಾ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕೇಪು ಶ್ರೀ ಸುಬ್ರಾಯ ದೇವಸ್ಥಾನದ ಪರಿಚಾರಕರು ಶ್ರೀಮತಿ ಕಮಲಾ, ಕಟೀಲು ಮೇಳದ ನಿವೃತ್ತ ಪ್ರಸಾಧನ ಕಲಾವಿದರು ಸೀತಾರಾಮ ರೈ ಮಡೇಲ, ಜಿನಚಂದ್ರ ಜೈನ್ ಮೈರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪ್ತಭಾಕರ ಶೆಟ್ಟಿ ದಂಬೆಕಾನ, ದಡ್ಡಂಗಡಿ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಗೋವಿಂದರಾಜ ಶೆಣೈ ಕೇಪು, ಪ್ರಕಾಶ್ ರೈ ಕಲ್ಲಂಗಳ, ಹರೀಶ್ ಬೊಳಂತಿಮೊಗರು, ಜಗಜೀವನ್ ರಾಮ್ ಶೆಟ್ಟಿ ಬೇಡೆಮಾರ್ ಹಾಗೂ ರಾಜಶೇಖರ ಶೆಟ್ಟಿ ತಾಳಿಪಡ್ಪು ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಬಳಿಕ ಶ್ರೀ ಹನುಮಗಿರಿ ಮೇಳದ ಕಲಾವಿದರಿಂದ ವರ್ಣ ಪಲ್ಲಟ ಎಂಬ ನೂತನ ಪೌರಾಣಿಕ ಪ್ರಸಂಗ ಪ್ರದರ್ಶನಗೊಂಡಿತು.
ಸುರೇಶ್ ಶೆಟ್ಟಿ ಪಡಿಬಾಗಿಲು , ವಿಜಯಶಂಕರ್ ಆಳ್ವ ಮಿತ್ತಳಿಕೆ ಕಾರ್ಯಕ್ರಮ ನಿರೂಪಿಸಿದರು.







