ಪುತ್ತೂರು(ನ.12): ಪುತ್ತೂರಿನ ದರ್ಬೆಯಲ್ಲಿರುವ ಯಮುನಾ ಬೊರ್ ವೆಲ್ಸ್ ದ.ಕ ಜಿಲ್ಲೆಯಲ್ಲಿಯೇ ಅತೀ ದೊಡ್ಡ ಬೊರ್ ವೆಲ್ ಸಂಸ್ಥೆಯಾಗಿದೆ. ನುಳಿಯಾಲು ದಿ.ಕೃಷ್ಣಶೆಟ್ಟಿ ಯವರ ಸ್ಥಾಪಿಸಿದ ಈ ಸಂಸ್ಥೆ ಈಗ ಅತೀ ದೊಡ್ಡ ಮಟ್ಟಿನ ಸಂಸ್ಥೆಯಾಗಿ ಬೆಳೆದಿದೆ. ಧಾರ್ಮಿಕ ಕಾರ್ಯಗಳಿಗೆ ಆರ್ಥಿಕ ನೆರವು ನೀಡುವಲ್ಲಿ ಈ ಸಂಸ್ಥೆಯು ಹೆಸರುವಾಸಿಯಾಗಿದೆ.

ದಿ.ಕೃಷ್ಣಶೆಟ್ಟಿ ಯವರು ಈ ಸಂಸ್ಥೆಯ ಸ್ಥಾಪಕರು. ಯಮುನಾ ಎಂಬುದು ಅವರ ತಾಯಿಯ ಹೆಸರಾಗಿದ್ದು , ತಮ್ಮ ತಾಯಿಯ ಮೇಲಿನ ಪ್ರೀತಿ-ಗೌರವದ ಪ್ರತೀಕವಾಗಿ ಈ ಸಂಸ್ಥೆಗೆ ಅವರ ಹೆಸರನ್ನು ಇಟ್ಟಿರುತ್ತಾರೆ.

ಸುಮಾರು 10 ವರ್ಷಗಳಿಂದ ಯಮುನಾ ಬೊರ್ ವೆಲ್ ಸಂಸ್ಥೆಯು ಸರಕಾರದ ಗಂಗಾ ಕಲ್ಯಾಣ ಯೋಜನೆಯಡಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪ ಸಂಖ್ಯಾತ ವರ್ಗಗಳಿಗೆ ಉಚಿತ ಬೊರ್ ವೆಲ್ ಅಳವಡಿಕೆ ಕಾರ್ಯವನ್ನು ನಡೆಸುತ್ತಾ ಬಂದಿದೆ.

ದಿ.ಕೃಷ್ಣಶೆಟ್ಟಿ ಯವರ ನಂತರ ಈ ಸಂಸ್ಥೆಯ ಮುಂದಾಳತ್ವವನ್ನು ಅವರ ಪತ್ನಿಯಾದ ಶ್ರೀ ಮತಿ.ದಿವ್ಯ ಕೆ.ಶೆಟ್ಟಿ ರವರು ವಹಿಸಿಕೊಂಡಿದ್ದಾರೆ. ಇವರ ಮಗಳಾದ ಕಾವ್ಯ ಕೆ.ಶೆಟ್ಟಿಯವರು ತಾಯಿಗೆ ಬೆಂಬಲವನ್ನು ನೀಡುತ್ತಾ ತಮ್ಮ ತಂದೆಯ ಹಾದಿಯಲ್ಲೇ ಹೆಸರು ಶಾಶ್ವತ ವಾಗಿರಬೇಕು ಆದರೆ ಹೆಸರಿಗಾಗಿ ಮಾತ್ರ ಕಾರ್ಯಸಾಧನೆಯನ್ನು ಮಾಡಬಾರದು ಎಂದು ದೃಢವಾಗಿ ನಂಬಿ ಅದನ್ನೇ ಪಾಲಿಸಿಕೊಂಡು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.









