ಕೇರಳ: ಇತ್ತೀಚೆಗೆ ಆನ್ಲೈನ್ನಲ್ಲಿ ಆರ್ಡರ್ ಮಾಡಿದ ವಸ್ತುಗಳ ಬದಲಿಗೆ ಇತರ ವಸ್ತುಗಳನ್ನು ಗ್ರಾಹಕರು ಪಡೆಯುತ್ತಿರುವ ಅದೆಷ್ಟೋ ಸುದ್ದಿಗಳು ಬೆಳಕಿಗೆ ಬರುತ್ತಿವೆ. ಇದೀಗ ಮತ್ತೊಂದು ಪ್ರಕರಣದಲ್ಲಿ ಅಮೆಜಾನ್ ಗ್ರಾಹಕನೊಬ್ಬ ಆನ್ಲೈನ್ನಲ್ಲಿ ಆಪಲ್ ಐಫೋನ್ 12 ಫೋನ್ ಆರ್ಡರ್ ಮಾಡಿದ್ದಾರೆ. ಆದರೆ ಬಂದಿದ್ದು ಏನು ಗೊತ್ತಾ ಮುಂದೆ ಓದಿ…
ಕೇರಳದ ಕೊಚ್ಚಿಯ ಅಮೆಜಾನ್ ಗ್ರಾಹಕರೊಬ್ಬರು ಅಮೆಜಾಜ್ ಪೇ ಕಾರ್ಡ್ ಮೂಲಕ ಅಕ್ಟೋಬರ್ 12ರಂದು 70,900 ರೂ.ಗಳನ್ನು ಪಾವತಿಸಿ ಐಫೋನ್ ಆರ್ಡರ್ ಮಾಡಿದ್ದರು. ಆದರೆ ಅಕ್ಟೋಬರ್ 15ರಂದು ಬಂದ ಬಾಕ್ಸ್ನಲ್ಲಿ ವಿಮ್ ಸೋಪ್ ಮತ್ತು 5 ರೂ. ನಾಣ್ಯವಿತ್ತು. ಇದರಿಂದ ಆಘಾತಗೊಂಡ ಗ್ರಾಹಕ ಪೊಲೀಸ್ ಠಾಣೆಗೆ ದೂರು ನೋಡಿದ್ದಾರೆ.
ತನಿಖೆಯ ಬಳಿಕ ಗ್ರಾಹಕ ಆರ್ಡರ್ ಮಾಡಿದ್ದ ಫೋನ್ ಈಗಾಗಲೇ ಜಾರ್ಖಂಡ್ನಲ್ಲಿ ಸಪ್ಟೆಂಬರ್ ತಿಂಗಳಿನಿಂದಲೇ ಯಾರೋ ಬಳಸುತ್ತಿರುವುದು ತಿಳಿದು ಬಂದಿದೆ. ನಾವು ಅಮೆಜಾನ್ ಅಧಿಕಾರಿಗಳು ಮತ್ತು ಗಾಹಕರನ್ನು ಸಂಪರ್ಕಿಸಿದ್ದೇವೆ.
ಸೆ.25ರಿಂದ ಈ ಫೋನ್ಅನ್ನು ಜಾರ್ಖಂಡ್ನಲ್ಲಿ ಬಳಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಇದೆ. ಆದರು ಅಕ್ಟೋಬರ್ನಲ್ಲಿ ಆರ್ಡರ್ ಮಾಡಲಾಗಿದೆ. ಮಾರಾಟಗಾರರನ್ನು ಸಂಪರ್ಕಿಸಿದ ಬಳಿಕ ಫೋನ್ ಸ್ಟಾಕ್ ಮುಗಿದಿದೆ. ಗ್ರಾಹಕರು ಪಾವತಿಸಿದ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.