Wednesday, August 5, 2026
spot_imgspot_img
spot_imgspot_img

ಈಶ್ವರಮಂಗಲ: ಒಂದು ವರ್ಷದ ಮಗುವಿನೊಂದಿಗೆ ನಾಪತ್ತೆಯಾದ ಮಹಿಳೆ..!

- Advertisement -
- Advertisement -

ಈಶ್ವರಮಂಗಲ: ಗಂಡನ ಮನೆಯಿಂದ ತವರಿಗೆ ಬಂದಿದ್ದ ಮಹಿಳೆ ತನ್ನ ಒಂದೂವರೆ ವರ್ಷದ ಮಗುವಿನೊಂದಿಗೆ ನಾಪತ್ತೆಯಾದ ಬಗ್ಗೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನೆಟ್ಟಣಿಗೆಮುನ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಪುಳಿತ್ತಡಿ ನಿವಾಸಿ ಅಬ್ದುಲ್ ಲತೀಫ್ ಅವರ ಪುತ್ರಿ, ನೆಲ್ಯಾಡಿ ಅಲ್ಲಾ ಅವರ ಪತ್ನಿ ಇರ್ಷಾನಾ(25ವ)ರವರು ತನ್ನ ಒಂದೂವರೆ ವರ್ಷದ ಮಗು ಮಹಮ್ಮದ್ ಆದಿಲ್ ಸಮೇತ ನಾಪತ್ತೆಯಾಗಿದ್ದಾರೆ.

ವಾರದ ಹಿಂದೆ ಇರ್ಷಾನಾ ಅವರು ಮಗುವಿನೊಂದಿಗೆ ಪುಳಿತ್ತಡಿಯ ತವರು ಮನೆಗೆ ಬಂದಿದ್ದರು. ಮೇ 20ರಂದು ಬೆಳಿಗ್ಗೆ ಆಕೆಯ ತಂದೆ ಮತ್ತು ತಾಯಿ ಕೇರಳದಲ್ಲಿ ನಡೆಯುವ ವಿವಾಹ ಸಮಾರಂಭಕ್ಕೆ ಹೋಗಿ ಸಂಜೆ ಮನೆಗೆ ಹಿಂದಿರುಗುವಾಗ ಇರ್ಷಾನಾ ಮತ್ತು ಮಗು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ಇರ್ಷಾನಾ ಅವರ ತಂದೆ ಅಬ್ದುಲ್ ಲತೀಫ್ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!