

ಬೆಳ್ತಂಗಡಿ : ಉಜಿರೆ ಪಿಯು ಕಾಲೇಜು ಹಿಂಭಾಗದ ನಾಗರಾಜ ಕಾಂಪೌಂಡ್ ಏರಿಯಾದಲ್ಲಿನ ಶಂಕರ ಶೆಟ್ಟಿ ಎಂಬವರ ಮನೆಯ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಘಟನೆ ನಡೆದಿದೆ.
ಶ್ರೀ ದುರ್ಗಾ ನಿಲಯ ಎಂಬ ಮನೆಯ ಬಾವಿಯಲ್ಲಿ ಶವ ಪತ್ತೆಯಾಗಿದೆ. ಆದರೆ ಈ ಮನೆಯವರು ಮೈಸೂರಿನಲ್ಲಿ ನೆಲೆಸಿದ್ದು, ಈ ಮನೆಗೆ ಬೀಗ ಹಾಕಿತ್ತು. ಒಂದು ವಾರದ ಹಿಂದೆ ಮನೆಯವರು ಬಂದಾಗ ಬಾವಿಯನ್ನು ಗಮನಿಸಿದ್ದರು. ಆದರೆ, ಇವರು ಮೃತ ದೇಹದ ತಲೆಯನ್ನು ತೆಂಗಿನಕಾಯಿ ಎಂದುಕೊಂಡು ವಾಪಾಸ್ ಆಗಿದ್ದರು.

ಆದರೆ ನಿನ್ನೆಯಿಂದ ಯಾವುದೋ ಮೃತದೇಹದ ವಾಸನೆ ಬರುತ್ತಿದ್ದುದನ್ನು ಗಮನಿಸಿದ ಊರಿನವರು, ಇಂದು ಬಂದು ನೋಡಿದಾಗ ಬಾವಿಯಲ್ಲಿ ಮೃತ ದೇಹವಿರುವುದು ಬೆಳಕಿಗೆ ಬಂದಿದೆ.
ತಕ್ಷಣ ಮನೆಯ ಮಾಲೀಕ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ನಂತರ ಮುಳುಗು ತಜ್ಞರಾದ ಗಾಂಧಿನಗರದ ಶಿಯಾಬ್, ಸಂಜಯನಗರ ಇಸ್ಮಾಯಿಲ್, ಕುಂಟಿನಿ ರಝಕ್, ಕುಂಟಿನಿ ರಫೀಕ್, ಆಂಬುಲೆನ್ಸ್ ಚಾಲಕ ಜಲಿಲ್ ಬಾಬಾ ಅವರನ್ನು ಕರೆಸಿ ಶವ ಮೇಲಕ್ಕೆತ್ತಿದ್ದಾರೆ.
ಶವ ಗಂಡಸಿನದ್ದಾಗಿದ್ದು ಬಲ ಕೈಯಲ್ಲಿ ‘ಮಂಜುಳಾ’ ಎಂಬುವುದಾಗಿ ಟ್ಯಾಟು ಹಾಕಿದ್ದಾರೆ, ಶವ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಶವಗಾರಕ್ಕೆ ಸಾಗಿಸಿದ್ದು, ಘಟನಾ ಸ್ಥಳಕ್ಕೆ ಬೆಳ್ತಂಗಡಿ ಎಸ್ ಐ ನಂದಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಸರ್ಕಾರಿ ಶಿಕ್ಷಕರಿಗೆ ಗುಡ್ ನ್ಯೂಸ್: TET ಉತ್ತೀರ್ಣತೆಗೆ ಕಾಲಾವಕಾಶ ವಿಸ್ತರಣೆ
- 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ
- ಸಂಪಾಜೆಯಲ್ಲಿ ಕಾಡು ಪ್ರಾಣಿ ಬೇಟೆ: 12 ಕೆಜಿ ಮಾಂಸದೊಂದಿಗೆ ಇಬ್ಬರು ಅರಣ್ಯ ಇಲಾಖೆಯ ವಶಕ್ಕೆ
- ಸ್ವಾತಂತ್ರ್ಯೋತ್ಸವ ಅಂಗವಾಗಿ ಆ.7ರಂದು ಪುತ್ತೂರಿನಲ್ಲಿ ಬೃಹತ್ ತಿರಂಗ ಯಾತ್ರೆ
- ಕುಂದಾಪುರ: ದಿನಸಿ ಅಂಗಡಿಯಲ್ಲಿ ಅಗ್ನಿ ಅವಘಡ; 40 ಲಕ್ಷ ರೂ.ಗೂ ಅಧಿಕ ನಷ್ಟ










