Tuesday, September 22, 2026
spot_imgspot_img
spot_imgspot_img

ಉಪ್ಪಿನಂಗಡಿ: ಹೊಟೇಲ್‌ ಗೆ ನುಗ್ಗಿ ದಾಂಧಲೆ; ಮಹಿಳಾ ಗ್ರಾಹಕಿಯೊಂದಿಗೆ ಅಸಭ್ಯ ವರ್ತನೆ..!

- Advertisement -
- Advertisement -

ಉಪ್ಪಿನಂಗಡಿ: ಹೊಟೇಲ್ ನಲ್ಲಿ ವ್ಯಕ್ತಿಯೋರ್ವ ಮಹಿಳಾ ಗ್ರಾಹಕಿಗೆ ಕಿರುಕುಳ ನೀಡಿದ್ದು, ಇದನ್ನು ಹೊಟೇಲ್ ಮಾಲಕರು ಪ್ರಶ್ನಿಸಿದಾಗ ದಾಂಧಲೆ ನಡೆಸಿರುವ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದ ಹೊಟೇಲ್ ವೊಂದರಲ್ಲಿ ನಡೆದಿದೆ.

ವೇಣೂರು ನಿವಾಸಿ ಪ್ರಶಾಂತ್ ದುಷ್ಕೃತ್ಯ ಎಸಗಿದಾತ. ಈತ ನಿನ್ನೆ ಹೊಟೇಲ್ ಗೆ ತೆರಳಿ ಊಟಕ್ಕೆ‌ಆರ್ಡರ್ ಮಾಡಿದ್ದು, ಬಳಿಕ ಸಮೀಪದ ಕುರ್ಚಿಯಲ್ಲಿ ಕುಳಿತಿದ್ದ ಮಹಿಳಾ ಗ್ರಾಹಕಿಗೆ ಕಿರುಕುಳ ನೀಡಿದ್ದಾನೆ.

ಈ ಬಗ್ಗೆ ಮಹಿಳೆ ಹೊಟೇಲ್ ಮಾಲಕರಲ್ಲಿ ಹೇಳಿದ್ದು
ಮಧ್ಯ ಪ್ರವೇಶಿಸಿದ ಮಾಲಕರು ಆತನನ್ನು ಹೊಟೇಲಿನಿಂದ ಹೊರಗೆ ಕಳುಹಿಸಿದ್ದಾರೆ.

ಇದರಿಂದ ಕೋಪಗೊಂಡ‌ ಪ್ರಶಾಂತ್ ಹೊಟೇಲಿಗೆ ನುಗ್ಗಿ ಮತ್ತೆ ಕಂಡ ಕಂಡವರಿಗೆ ಸೋಡಾ ಬಾಟ್ಲಿಯನ್ನು ಎಸೆಯಲಾರಂಭಿಸಿದ್ದಾನೆ. ಕುರ್ಚಿ ಕೂಡ ಎಸೆದಿದ್ದಾನೆ. ಈ ವೇಳೆ ಬಿದ್ದು ಆತನಿಗೆ ಗಾಯವಾಗಿದೆ.

ಈ ಬಗ್ಗೆ ಹೊಟೇಲ್‌ ಮಾಲಕರು ದೂರು ನೀಡಿದ್ದಾರೆ.

- Advertisement -

Related news

error: Content is protected !!