Tuesday, June 16, 2026
spot_imgspot_img
spot_imgspot_img

ಊಟ ಕೊಡುವುದಾಗಿ ನಂಬಿಸಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಅಪ್ರಾಪ್ತ ಬಾಲಕನಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ ದಂಡ

- Advertisement -
- Advertisement -
vtv vitla
vtv vitla

ಹಾವೇರಿ: ಊಟ ಕೊಡುವುದಾಗಿ ಬಾಲಕಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಅಪ್ರಾಪ್ತ ಬಾಲಕನಿಗೆ 10 ವರ್ಷಗಳ ಕಠಿಣ ಸಜೆ ಹಾಗೂ 5 ಸಾವಿರ ರೂ. ದಂಡವನ್ನು ವಿಧಿಸಲಾಗಿದೆ.

vtv vitla
vtv vitla

2018ರ ಜನವರಿ 16ರಂದು ಬಾಲಕಿಗೆ ಊಟದ ಆಮಿಷ ತೋರಿಸಿ ಬಾಲಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದ ಕುರಿತು ದೂರು ದಾಖಲಿಸಲಾಗಿತ್ತು. ಪೊಲೀಸ್​ ವೃತ್ತ ನಿರೀಕ್ಷಕರು ಪ್ರಕರಣದ ತನಿಖೆ ನಡೆಸಿ, ಬಾಲಕನ ವಿರುದ್ಧ ಸಾಕ್ಷಾಧಾರಗಳು ದೃಢಪಟ್ಟಿದ್ದರಿಂದ ಬಾಲ ನ್ಯಾಯ ಮಂಡಳಿಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನಂತರ ಈ ಪ್ರಕರಣವು ಮಕ್ಕಳ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆತನಿಗೆ ಪೋಕ್ಸೋ ಕಾಯ್ದೆ ಕಲಂ 6ನೇ ಅಡಿ 10 ವರ್ಷಗಳ ಕಠಿಣ ಶಿಕ್ಷೆ, 5 ಸಾವಿರ ರೂ. ದಂಡ ಹಾಗೂ ಸಂತ್ರಸ್ತೆಗೆ 1 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿ ತೀರ್ಪು ನೀಡಿದ್ದಾರೆ.

vtv vitla
vtv vitla
vtv vitla
- Advertisement -

Related news

error: Content is protected !!