Monday, June 22, 2026
spot_imgspot_img
spot_imgspot_img

ಎರಡು ರೌಡಿ ಗುಂಪುಗಳ ನಡುವೆ ಮಾರಾಮಾರಿ; ಓರ್ವನ ಕೊಲೆ, ಇಬ್ಬರ ಸ್ಥಿತಿ ಗಂಭೀರ!

- Advertisement -
- Advertisement -

ಕೋಲಾರ: ಜಿಲ್ಲೆಯಲ್ಲಿ ಎರಡು ರೌಡಿ ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದಿದ್ದು, ಓರ್ವನ ಹತ್ಯೆಯಾಗಿ, ಇಬ್ಬರು ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ಕೆಜಿಎಫ್ ನಲ್ಲಿ ನಡೆದಿದೆ.

ಕೋಲಾರದ ಕೆಜಿಎಫ್ ನ ಚಾಂಫಿಯನ್ ರೀಫ್ಸ್ ನ ಇಟಿ ಬ್ಲಾಕ್ ನಲ್ಲಿ, ಹಳೆಯ ದ್ವೇಷದ ಹಿನ್ನಲೆಯಲ್ಲಿ ರಾಜ್ ಕುಮಾರ್ ಹಾಗೂ ಜೈಕಾಂತ್ ಬಣಗಳ ನಡುವೆ ಗ್ಯಾಂಗ್ ವಾರ್ ನಡೆದಿದೆ. ಎರಡು ಕಾರಿನಲ್ಲಿ ಬಂದಂತಹ ಜೈಕಾಂತ್ ತಂಡದವರು, ರಾಜ್ ಕುಮಾರ್ ಟೀಂನವರನ್ನು ಅಟ್ಟಾಡಿಸಿಕೊಂಡು ಹೊಡೆದು ಹತ್ಯೆಗೈದಿದ್ದಾರೆ. ಬಳಿಕ ಕಾರಿನಲ್ಲಿಯೇ ಪರಾರಿಯಾಗಿದ್ದಾರೆ.

ಘಟನೆಯಲ್ಲಿ ರಾಜ್ ಕುಮಾರ್ ಹತ್ಯೆಯಾಗಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ರಾಬರ್ಟ್ ಸನ್ ಪೇಟೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!