Saturday, September 5, 2026
spot_imgspot_img
spot_imgspot_img

ಕಡಬ: ವಿವಾಹಿತ ಮಹಿಳೆ ಜೊತೆ ವಿವಾಹಿತ ವ್ಯಕ್ತಿ ಎಸ್ಕೇಪ್ : ಮೂಡಿಗೆರೆ ಬಳಿ ಸಿಕ್ಕಿಬಿದ್ದ ಜೋಡಿ

- Advertisement -
- Advertisement -

ಕಡಬ: ಯುವಕ ಯುವತಿಯರು ಪ್ರೀತಿಸಿ ಪರಾರಿಯಾಗುವ ವಿಚಾರ ಆಗಾಗ ಸುದ್ದಿಯಾಗುತ್ತಿರುತ್ತದೆ. ಆದರೆ ವಿವಾಹಿತ ಮಹಿಳೆ ಜೊತೆ ವಿವಾಹಿತ ಪುರುಷನೊಬ್ಬ ಕಡಬದಿಂದ ಪರಾರಿಯಾಗಿ ಮೂಡಿಗೆರೆ ಬಳಿ ಸಿಕ್ಕಿ ಬಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ವಿವಾಹಿತ ಪುರುಷ ಕೊಣಾಜೆಯ ಮಹಿಳೆ ಜೊತೆ ಪರಾರಿಯಾಗಿರುವುದಾಗಿದೆ. ಈ ಘಟನೆ ನಡೆದು ಮೂರು ದಿನಗಳು ಕಳೆದರೂ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚಾ ವಿಷಯವಾಗಿದೆ. ಪರಾರಿಯಾದ ಇಬ್ಬರೂ ಮೂಡಿಗೆರೆ ಬಳಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

ಈ ಘಟನೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಪರಾರಿಯಾದ ಮಹಿಳೆಯ ಪತಿ ನೀಡಿದ ದೂರಿನ ಮೇರೆಗೆ ಪೊಲೀಸರು ಮೂಡಿಗೆರೆ ಬಳಿಯಿಂದ ಇಬ್ಬರನ್ನೂ ಠಾಣೆಗೆ ಕರೆದುಕೊಂಡು ಬಂದಿದ್ದಾರೆಂದು ಹೇಳಲಾಗುತ್ತಿದೆ. ಕೋಡಿಂಬಾಳದ ವ್ಯಕ್ತಿಯ ಪತ್ನಿಯೂ ದೂರು ನೀಡಲು ಮುಂದಾಗಿದ್ದರು ಎನ್ನಲಾಗಿದೆ.

ಈ ವಿಚಾರ ಠಾಣೆಯಲ್ಲಿ ಮನೆಯವರ ಸುದೀರ್ಘ ಮಾತುಕತೆಯ ಬಳಿಕ ಈ ಪ್ರಕರಣ ಸುಖ್ಯಾಂತ್ಯಗೊಂಡಿರುವುದುದಾಗಿ ತಿಳಿದು ಬಂದಿದೆ. ಆದರೆ ಈ ವಿಚಾರದ ಬಗ್ಗೆ ಪೊಲೀಸರಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

- Advertisement -

Related news

error: Content is protected !!