- Advertisement -
- Advertisement -




ವಿಟ್ಲ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ದ ಕ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದೊಂದಿಗೆ ಮತ್ತೊಮ್ಮ ಮೇಲುಗೈ ಸಾಧಿಸಿದೆ. ವಿಟ್ಲದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿ ಶೇಕಡಾ 100% ಫಲಿತಾಂಶದೊಂದಿಗೆ ಈ ಬಾರಿಯ 2025-26 ನೇ ಸಾಲಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದೆ.
ಒಟ್ಟು 114 ವಿದ್ಯಾರ್ಥಿಗಳ ಪೈಕಿ 52 ವಿದ್ಯಾರ್ಥಿಗಳು ಉನ್ನತ ಶ್ರೇಣಿಯೊಂದಿಗೆ ತೇರ್ಗಡೆಹೊಂದಿ ರಾಜ್ಯದಲ್ಲಿ ವಿವಿಧ ಉನ್ನತ ಶ್ರೇಣಿಯನ್ನು ಅಲಂಕರಿಸಿದ್ದಾರೆ. 62 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ತೇರ್ಗಡೆ ಹೊಂದಿದ್ದಾರೆ. ಜನನಿ ಎಸ್ 618 ಅಂಕ, ಫಾತಿಮಾ ಅಸ್ನ -614 ಅಂಕ, ಹಾಗೂ ಸಂಹಿತಾ ಎನ್ – 609 ಅಂಕಗಳನ್ನು ಪಡೆದು ಶಾಲೆಯ ಹಿರಿಮೆಗೆ ಮತ್ತೊಂದು ಗರಿಮೆ ತಂದಿರುತ್ತಾರೆ. ಶೈಕ್ಷಣಿಕ ಸಾಧನೆ ಗೈದ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲಾ ಆಡಳಿತ ಮಂಡಳಿ ಮತ್ತು ಅಧ್ಯಾಪಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ
- Advertisement -








