ಕಡಬ: ಐತ್ತೂರು ಗ್ರಾಮದ ಕಲ್ಲಾಜೆಯಲ್ಲಿ ಯುವತಿಯೋರ್ವಳಿಗೆ ಅನ್ಯಮತಿಯ ಯುವಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಯುವತಿ ಕಡಬ ಠಾಣೆಗೆ ದೂರು ನೀಡಿದ್ದು ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿರುವ ಯುವತಿ, ಮೋನು ಎಂಬವರ ಪುತ್ರ ಶಕೀರ್ ಎಂಬಾತ ಕಳೆದ ಎರಡು ದಿನಗಳಿಂದ ಕಿರುಕುಳ ನೀಡುತ್ತಿದ್ದು, ಮಾ.28ರಂದು ಕಲ್ಲಾಜೆ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ದಾರಿಯಲ್ಲಿ ಅಡ್ಡ ನಿಂತು ಲೈಂಗಿಕ ಕಿರುಕುಳ ನೀಡಿದ್ದಾನೆ, ಕಳೆದೆರಡು ದಿನಗಳಿಂದ ತೊಂದರೆ ಕೊಡುತ್ತಿರುವುದರಿಂದ ಮನೆಯವರಿಗೂ ವಿಷಯ ತಿಳಿಸಿದ್ದು ಆ ಹಿನ್ನೆಲೆಯಲ್ಲಿ ನಾನು ಕಡಬದಿಂದ ಕಲ್ಲಾಜೆ ಹೋಗುವ ವೇಳೆಯಲ್ಲಿ ಮನೆಯವರೂ ಬಂದಿದ್ದು ಇದೇ ವೇಳೆ ಯುವಕ ಮೈ ಮೇಲೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ ಬಿಡಿಸಲು ಬಂದ ನನ್ನ ಅತ್ತೆಯವರಿಗೂ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಕಡಬ ಠಾಣೆಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಾರೆ.
ಹಿಂದೂ ಸಂಘಟನೆ ಕಾರ್ಯಕರ್ತರ ಜಮಾವಣೆ : ಹಿಂದೂ ಯುವತಿಗೆ ಅನ್ಯಮತಿಯ ಯುವಕನಿಂದ ಲೈಂಗಿಕ ಕಿರುಕುಳವಾಗಿದ್ದು ಯತ್ನ ಮಾಡಲಾಗಿದೆ, ಯುವಕನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಕಡಬ ಠಾಣೆಯ ಎದುರು ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ್ದರು.