Thursday, September 10, 2026
spot_imgspot_img
spot_imgspot_img

ಕಾಸರಗೋಡು: 17ರ ಬಾಲಕಿ ಮೇಲೆ ಗ್ಯಾಂಗ್ ರೇಪ್; ಇಬ್ಬರು ಆರೋಪಿಗಳು ಅಂದರ್

- Advertisement -
- Advertisement -

ಕಾಸರಗೋಡು: ಹದಿನೇಳರ ಹರೆಯದ ಬಾಲಕಿ ಮೇಲೆ ಸರಣಿ ಅತ್ಯಾಚಾರ ನಡೆಸಿದ ಘಟನೆ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು , ಕೃತ್ಯಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಪೊಲೀಸರುಬಂಧಿಸಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ತಲೆಮರೆಸಿಕೊಂಡಿದ್ದಾರೆ. ಬಂಧಿತರಲ್ಲಿ ಬಾಲಕಿಯ ಸ್ನೇಹಿತನು ಒಳಗೊಂಡಿದ್ದಾನೆ. ಫೋಕ್ಸೋ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಂಧಿತರನ್ನು ನೆಲ್ಲಿಕಟ್ಟೆಯ ಅರಾಫತ್ (23) ಮತ್ತು ತಳಂಗರೆಯ ಮುಹಮ್ಮದ್ ಷರೀಫ್ (28) ಎಂದು ಗುರುತಿಸಲಾಗಿದೆ.

ಕೃತ್ಯಕ್ಕೆ ಸಂಬಂಧಪಟ್ಟಂತೆ ಕಾಸರಗೋಡು ಮಹಿಳಾ ಪೊಲೀಸ್ ಠಾಣೆ ಯಲ್ಲಿ ಐದು ಪ್ರಕರಣಗಳು ದಾಖಲಾಗಿದ್ದು , 13 ಮಂದಿ ವಿರುದ್ಧ ಪೋಕ್ಸೋ ಕಾಯ್ದೆಯಂತೆ ಮೊಕದ್ದಮೆ ದಾಖಲಿಸಲಾಗಿದೆ.

ಬಾಲಕಿಗೆ ಪರಿಚಯವಾದ ಅರಾಫತ್ ಎಂಬಾತ ಪ್ರೀತಿಸಿ ವಿವಾಹ ವಾಗುವ ನಾಟಕವಾಡಿ ಜುಲೈ 31 ರಂದು ಬಾಲಕಿಯನ್ನು ಕಾಸರಗೋಡಿಗೆ ಕರೆತಂದು ವಸತಿ ಗ್ರಹವೊಂದರಲ್ಲಿ ಅತ್ಯಾಚಾರ ನಡೆಸಿ ಬಳಿಕ ಮನೆಗೆ ತಲುಪಿಸಿದ್ದರು ಎನ್ನಲಾಗಿದೆ. ಬಾಲಕಿಯನ್ನು ಇತರ 13 ಮಂದಿಗೆ ಒಪ್ಪಿಸಿದ್ದು ಈ ಬಗ್ಗೆ ಬಾಲಕಿ ತಾಯಿಗೆ ಮಾಹಿತಿ ನೀಡಿದ್ದಳು. ಬಳಿಕ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರಂತೆ 13 ಮಂದಿ ಪೋಕ್ಸೋ ಕಾಯ್ದೆಯಂತೆ ದೂರು ದಾಖಲಿಸಲಾಗಿತ್ತು.

- Advertisement -

Related news

error: Content is protected !!