Sunday, July 26, 2026
spot_imgspot_img
spot_imgspot_img

ಕಾಸರಗೋಡು: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಮದ್ರಸ ಅಧ್ಯಾಪಕನಿಗೆ ಶಿಕ್ಷೆ ಪ್ರಕಟ..!

- Advertisement -
- Advertisement -
vtv vitla
vtv vitla
vtv vitla
vtv vitla

ಕಾಸರಗೋಡು: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮದ್ರಸ ಅಧ್ಯಾಪಕನಿಗೆ ಶಿಕ್ಷೆ ಹಾಗೂ ಮೂರು ಲಕ್ಷ ರೂಪಾಯಿ ದಂಡ ವಿಧಿಸಿ ಕಾಸರಗೋಡು ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ.

ಬಂಟ್ವಾಳ ಮೂಲದ ಅಬ್ದುಲ್ ಮಜೀದ್ ಲತೀಫ್(45) ಶಿಕ್ಷೆಗೊಳಗಾದವನು. 2016 ರ ಜನವರಿ 21ರಂದು ಕೃತ್ಯ ಬೆಳಕಿಗೆ ಬಂದಿತ್ತು. ಏಳು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಕಾಸರಗೋಡು ನಗರ ಠಾಣಾ ಪೊಲೀಸರಿಗೆ ದೂರು ಲಭಿಸಿತ್ತು. ದೂರು ಲಭಿಸಿದ ಹಿನ್ನಲೆಯಲ್ಲಿ ಪೊಲೀಸರು ಅಬ್ದುಲ್ ಮಜೀದ್ ವಿರುದ್ದ ಸಾಕ್ಷ್ಯ ಕಲೆ ಹಾಕಿ ಈತನನ್ನು ಬಂಧಿಸಿತ್ತು.

ಪ್ರಕರಣದಲ್ಲಿ 15 ಸಾಕ್ಷಿಗಳು ಹಾಗೂ 14 ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್ ಹಾಜರು ಪಡಿಸಿತ್ತು. ಇದೀಗ ವಿಚಾರಣೆ ಬಳಿಕ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ.

- Advertisement -

Related news

error: Content is protected !!