Sunday, September 13, 2026
spot_imgspot_img
spot_imgspot_img

ಕಾಸರಗೋಡು: ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ವೇಳೆ ಕೈಯಲ್ಲಿದ್ದ ಕತ್ತಿ ಎದೆಗೆ ತಾಗಿ ವ್ಯಕ್ತಿ ಮೃತ್ಯು

- Advertisement -
- Advertisement -

ಕಾಸರಗೋಡು: ಕಾಲು ಜಾರಿ ಬಿದ್ದು ಕೈಯಲ್ಲಿದ್ದ ಕತ್ತಿ ಎದೆಗೆ ತಾಗಿದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ದಾರುಣ ಘಟನೆ ಮಂಗಳವಾರ ಬೆಳಿಗ್ಗೆ ಮುನ್ನಾಡ್ ಬಳಿ ನಡೆದಿದೆ.

ಮುನ್ನಾಡ್ ಪಳ್ಳತುಂಗಾಲ್‌ನ ಕೆ.ಎಂ ಜೋಸೆಫ್ (66) ಮೃತಪಟ್ಟವರು.

ಬೆಳಿಗ್ಗೆ ಪತ್ನಿ ಜೊತೆ ಸಮೀಪದ ರಬ್ಬರ್ ತೋಟಕ್ಕೆ ರಬ್ಬರ್ ಟ್ಯಾಪಿಂಗ್ ಗೆ ತೆರಳುತ್ತಿದ್ದಾಗ ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದು ಕೈಯಲ್ಲಿದ್ದ ಟ್ಯಾಪಿಂಗ್ ಕತ್ತಿ ಎದೆಯ ಭಾಗಕ್ಕೆ ತಗಲಿದೆ. ಪತ್ನಿಯ ಬೊಬ್ಬೆ ಕೇಳಿ ಓಡಿ ಬಂದ ಪರಿಸರವಾಸಿಗಳು ಆಸ್ಪತ್ರೆಗೆ ತಲಪಿಸಿ ದರೂ ಜೀವ ಉಳಿಸಲಾಗಲಿಲ್ಲ.

ಇನ್ನು ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿರಿಸಲಾಗಿದ್ದು ಮರಣೋತ್ತರ ಪರೀಕ್ಷೆ ಬಳಿಕ ಬಿಟ್ಟುಕೊಡಲಿದೆ.

- Advertisement -

Related news

error: Content is protected !!