Thursday, September 10, 2026
spot_imgspot_img
spot_imgspot_img

ಕಾಸರಗೋಡು: ಹಾವು ಕಡಿದು ಯುವ ಇಂಜಿನಿಯರ್ ಮೃತ್ಯು

- Advertisement -
- Advertisement -

ಕಾಸರಗೋಡು: ಹಾವು ಕಡಿದು ಯುವ ಇಂಜಿನಿಯರ್ ಓರ್ವರು ಮೃತಪಟ್ಟ ಘಟನೆ ಬದಿಯಡ್ಕದಲ್ಲಿ ನಡೆದಿದೆ.

ಬದಿಯಡ್ಕ ಪಟ್ಟಾಜೆಯ ಗೋಪಾಲಕೃಷ್ಣ ಭಟ್ -ತಿರುಮಲೇಶ್ವರಿ ದಂಪತಿಯ ಏಕೈಕ ಪುತ್ರ ಪಿ.ವಿ ಕೃಷ್ಣ ಕುಮಾರ್ (27) ಮೃತ ಪಟ್ಟವರು.

ಮನೆ ಸಮೀಪ ಭಾನುವಾರ ಸಂಜೆ ಹಾವು ಕಚ್ಚಿದ್ದು, ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ತಲಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾರೆ.

ಕೃಷ್ಣ ಕುಮಾರ್ ಚೆನ್ನೈನಲ್ಲಿರುವ ಅಮೆರಿಕನ್ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ದುಡಿಯುತ್ತಿದ್ದು, ದೀಪಾವಳಿ ಹಬ್ಬದ ಹಿನ್ನೆಲೆ ಯಲ್ಲಿ ರಜೆಯಲ್ಲಿ ಶನಿವಾರವಷ್ಟೇ ಊರಿಗೆ ಬಂದಿದ್ದರು.

- Advertisement -

Related news

error: Content is protected !!