Monday, July 27, 2026
spot_imgspot_img
spot_imgspot_img

ಕೋಟ: ಪಾರಂಪಳ್ಳಿ ಕಡಲ ಕಿನಾರೆಯಲ್ಲಿ ದೋಣಿ ಮಗುಚಿ ಒರ್ವ ಯುವಕ ಮೃತ್ಯು, ಇಬ್ಬರು ಪಾರು

- Advertisement -
- Advertisement -

ಕೋಟ: ಪಾರಂಪಳ್ಳಿ ಪಡುಕರೆಯಲ್ಲಿ‌ ಕಡಲ ಕಿನಾರೆಯಲ್ಲಿ ಮೀನುಗಾರಿಕೆ ತೆರಳಿದ ಸಂದರ್ಭದಲ್ಲಿ ದೋಣಿ ಮಗುಚಿ ಓರ್ವ ಸಾವಿಗಿಡಾಗಿ ಈರ್ವರು ಪಾರಾದ ಘಟನೆ ಶುಕ್ರವಾರ ನಡೆದಿದೆ.

ಸಾವಿಗಿಡಾದ ಮೀನುಗಾರ ಪಾರಂಪಳ್ಳಿ ನಿವಾಸಿ ಸುಮಂತ್ ಮೊಗವೀರ (23) ಎಂದು ಗುರುತಿಸಲಾಗಿದೆ.

ಶುಕ್ರವಾರ ಪೂರ್ವಾಹ್ನ 11ಕ್ಕೆ ಸ್ಥಳೀಯರಾದ ಸಂದೀಪ್, ಪ್ರಜ್ವಲ್ ಹಾಗೂ ಸುಮಂತ್ ಮೂವರು ಮೀನುಗಾರಿಕೆ ತೆರಳಲು ನಾಡದೋಣಿಯ ಮೂಲಕ ಸಮುದ್ರಕ್ಕೆ ತೆರಳಿದರು ಎನ್ನಲಾಗಿದ್ದು ಸಮುದ್ರದಲ್ಲಿ ಈ ವೇಳೆ ಸಮುದ್ರದ ಬಾರಿ ಗಾತ್ರದ ಅಲೆಗೆ ಸಿಲುಕಿ ದೋಣಿಯಲ್ಲಿದ್ದ ಈ ಮೂವರು ಮುಗುಚಿ ಬಿದ್ದಿದ್ದು, ಇಬ್ಬರು ಸಂದೀಪ್ ಮತ್ತು ಪ್ರಜ್ವಲ್ ಈಜಿ ದಡ ಸೇರಿದ್ದಾರೆ ಎನ್ನಲಾಗಿದೆ.
ಆದರೆ ಮೃತ ಸುಮಂತ್ ಗೆ ಸಮುದ್ರದ ಬಾರಿ ಗಾತ್ರದ ಅಲೆಗಳ ನಡುವೆ ಈಜಿದರೂ ಪ್ರಯೋಜನ ಬಾರದೆ ಸಮುದ್ರದ ಅಲೆಗಳೊಂದಿಗೆ ಕೊಚ್ಚಿ ಹೋಗಿದ್ದಾರೆ.

ಇನ್ನು ಅಲ್ಲಿ ಸಮೀಪ ಮೀನುಗಾರಿಕೆ ನಡೆಸುತ್ತಿದ್ದ ಸ್ಥಳೀಯರು ಬಲೆ ಬಿಸಿ ಸುಮಂತ್ ನನ್ನು ಮೇಲೆ ಎಳೆದಿದ್ದು ತಕ್ಷಣ ಅವರನ್ನು ಜೀವನ್ ಮಿತ್ರ ಆ್ಯಂಬುಲೇನ್ಸ್ ಮೂಲಕ ಆಸ್ಪತ್ರೆಗೆ ಸ್ಥಳಾಂತರಿಸಿದ್ದು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!