- Advertisement -
- Advertisement -


ಕಾಸರಗೋಡು: ಗುಂಡೇಟು ತಗುಲಿ ಸಿಪಿಐ ಮುಖಂಡರೋರ್ವರು ಮೃತಪಟ್ಟ ದಾರುಣ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಪೊಯಿನಾಚಿ ಕರಿಚ್ಚೇರಿಯಲ್ಲಿ ನಡೆದಿದೆ.
ಕರಿಚ್ಚೇರಿ ಯ ಮಾಧವನ್ (65) ಮೃತಪಟ್ಟವರು. ಹಲಸು ಕೊಯ್ಯಲು ಹಿತ್ತಿಲಿಗೆ ತೆರಳಿದ್ದ ಮಾಧವನ್ ರವರು ನೆಲದಲ್ಲಿಟ್ಟಿದ್ದ ಕೋವಿಯನ್ನು ಮೆಟ್ಟಿದಾಗ ಗುಂಡು ಕಾಲಿಗೆ ತಗಲಿದೆ.

ಕಾಡುಹಂದಿಗೆ ಗುರಿ ಇಟ್ಟು ಈ ಕೋವಿಯನ್ನು ಪರಿಸರವಾಸಿಯೊಬ್ಬರು ಹಿತ್ತಿಲಿನಲ್ಲಿ ತಂದಿಟ್ಟಿದ್ದರು ಎನ್ನಲಾಗಿದೆ. ಘಟನೆ ನಡೆದ ಗಂಟೆಗಳ ಬಳಿಕ ಇದು ಮನೆಯವರ ಗಮನಕ್ಕೆ ಬಂದಿದೆ . ಕೂಡಲೇ ಕಾಸರಗೋಡು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ . ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ ‘ಭಾರತ್ ಜೋಡೋ ಯುವ ಸಂಘ’ ರಚನೆಗೆ ಪೂರ್ವಭಾವಿ ಸಭೆ: 4 ಸಂಘಗಳ ಸ್ಥಾಪನೆಗೆ ಸಿದ್ಧತೆ
- ದ.ಕ.ದಲ್ಲಿ ಭಾರೀ ಮಳೆ ಎಚ್ಚರಿಕೆ: ಆ.8ರಂದು ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ಶಾಲೆ-ಕಾಲೇಜುಗಳಿಗೆ ರಜೆ
- ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಪ್ರಕರಣ-ಘಟನೆಯಾದ 3 ದಿನಗಳೊಳಗಾಗಿ ಪ್ರಕರಣ ಭೇದಿಸಿ,ಆರೋಪಿಗಳ ಬಂಧನ
- ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ: ಆಗಸ್ಟ್ 24ಕ್ಕೆ ಕರಡು, ಅಕ್ಟೋಬರ್ 27ಕ್ಕೆ ಅಂತಿಮ ಪಟ್ಟಿ
- ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ – ಚಾಲಕ ಸ್ಪೋಟ್ ಡೆತ್



- Advertisement -








