Sunday, October 25, 2026
spot_imgspot_img
spot_imgspot_img

ಡ್ರಗ್ಸ್ ಪ್ರಕರಣ: ಇಂದ್ರಜಿತ್​ ಲಂಕೇಶ್ ಗೆ ಮತ್ತೊಮ್ಮೆ ಸಿಸಿಬಿ ಬುಲಾವ್!

- Advertisement -
- Advertisement -

ಬೆಂಗಳೂರು: ಇಂದು ಬೆಳಗ್ಗೆ 11ಕ್ಕೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡುವಂತೆ ನಟ ಹಾಗೂ ನಿರ್ದೇಶಕ ಇಂದ್ರಜಿತ್​ ಲಂಕೇಶ್ ರವರಿ​ಗೆ ಸಿಸಿಬಿ ಸೂಚಿಸಿದೆ.

ಸ್ಯಾಂಡಲ್​ವುಡ್​ನ ಹಲವು ನಟ-ನಟಿಯರು ಮತ್ತು ನಿರ್ದೇಶಕರು ಡ್ರಗ್ಸ್​ ಜಾಲದಲ್ಲಿ ಭಾಗಿಯಾಗಿದ್ದಾರೆ. ಈ ಮಾಫಿಯಾದ ಹಿಂದೆ ರಾಜಕಾರಣಿಗಳು, ಮಾಡೆಲ್ ಏಜೆನ್ಸಿಗಳು ಎಲ್ಲರೂ ಭಾಗಿಯಾಗಿದ್ದಾರೆ.

ಈ ಕುರಿತು ನನ್ನ ಬಳಿ ಮಾಹಿತಿ ಇದೆ ಎಂದು ಕಳೆದ ಆಗಸ್ಟ್​ನಲ್ಲಿ ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ ಇಂದ್ರಜಿತ್​ ಲಂಕೇಶ್​ ಅವರನ್ನು ಹಿಂದೊಮ್ಮೆ ಸಿಸಿಬಿ ವಿಚಾರಣೆಗೊಳಪಡಿಸಿತ್ತು.

ಹಲವು ತಿಂಗಳುಗಳ ಕಾಲ ಪರಪ್ಪನ ಅಗ್ರಹಾರದಲ್ಲಿದ್ದ ನಟಿ ಸಂಜನಾ ಮತ್ತು ನಟಿ ರಾಗಿಣಿ ಜಾಮೀನು ಪಡೆದು ಹೊರಬಂದಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಇಂದ್ರಜಿತ್‌ ರವರನ್ನು ಸಿಸಿಬಿ ವಿಚಾರಣೆಗೆ ಕರೆದಿದ್ದಾರೆ.

- Advertisement -

Related news

error: Content is protected !!