Friday, July 24, 2026
spot_imgspot_img
spot_imgspot_img

ದ.ಕ, ಕೊಡಗು, ಉಡುಪಿ ಮೂಲದ Rss ಹಾಗೂ ಬಿಜೆಪಿ ಮುಖಂಡರ ಹತ್ಯೆಗೆ ಪ್ಲಾನ್; ಕೇರಳದಲ್ಲಿ ಬಂಧಿತ PFI ಕಾರ್ಯಕರ್ತನ ಪೆನ್‌ಡ್ರೈವ್‌ನಲ್ಲಿ ಸ್ಫೋಟಕ ಮಾಹಿತಿ ಲಭ್ಯ

- Advertisement -
- Advertisement -
astr

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಚೇರಿಗಳ ಮೇಲೆ ಎನ್‌ಐಎ ದಾಳಿ ನಡೆಸಿದೆ. ಈ ದಾಳಿಯಲ್ಲಿ ಬಂಧಿತ, PFI ಕಾರ್ಯಕರ್ತರನ್ನು ವಿಚಾರಣೆ ನಡೆಸಿದ ಪೋಲೀಸರಿಗೂ ಶಾಕ್ ನೀಡಿದೆ.

ದಕ್ಷಿಣ ಕನ್ನಡ, ಕೊಡಗು, ಉಡುಪಿ ಮೂಲದ Rss ಹಾಗೂ ಬಿಜೆಪಿ ನಾಯಕರ ಹತ್ಯೆಗೆ ಪ್ಲಾನ್..!

ಕೇರಳದಲ್ಲಿ ಬಂಧಿತ PFI ಕಾರ್ಯಕರ್ತನ ಪೆನ್‌ಡ್ರೈವ್‌ನಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ದಕ್ಷಿಣ ಕನ್ನಡ, ಕೊಡಗು, ಉಡುಪಿ ಮೂಲದ Rss ಹಾಗೂ ಬಿಜೆಪಿ ನಾಯಕರ ಹತ್ಯೆಗೆ ಪ್ಲಾನ್ ರೂಪಿಸಲಾಗಿದ್ದು, ನಾಯಕರ ಫೋಟೋ, ವಿವರ, ಮನೆ ಹಾಗೂ ಕಛೇರಿ ವಿಳಾಸ, ಮಾರ್ಗಸೂಚಿ ಇತ್ಯಾದಿಗಳು ಪತ್ತೆಯಾಗಿದ್ದು, ಭೀರಕ ಸಂಚು ಬಯಲಾಗಿದೆ.

ಪಿಎಫ್‌ಐ ಪ್ರತಿಭಟನೆಗೆ ಹೈಕೋರ್ಟ್‌ ಕೆಂಡಾಮಂಡಲ: ಸ್ವಯಂ ಪ್ರೇರಿತ ದೂರು ದಾಖಲು-ನ್ಯಾಯಾಂಗ ನಿಂದನೆ ಎಚ್ಚರಿಕೆ :

ದೇಶದ ನಾನಾ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಕೇರಳದಲ್ಲಿ ಬಂದ್‌ಗೆ ಕರೆ ನೀಡಿದೆ. ಈ ಕ್ರಮಕ್ಕೆ ಕೇರಳ ಹೈಕೋರ್ಟ್ ಕೆಂಡಾಮಂಡಲವಾಗಿದೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮತ್ತು ಪಿಎಫ್‌ಐ ಸಂಘಟನೆಗಳು ಇಸ್ಲಾಂ ಧರ್ಮದ ತೀವ್ರವಾದಿ ಸಂಘಟನೆಗಳಾಗಿವೆ. ಆದರೆ ಈ ಸಂಘಟನೆಗಳನ್ನು ಏಕೆ ಈವರೆಗೆ ನಿಷೇಧಿಸಲಾಗಿಲ್ಲ ಎಂದು ಕಳೆದ ಮೇ ತಿಂಗಳಿನಲ್ಲಿ ವಿಚಾರಣೆಯೊಂದರ ವೇಳೆ ಕೇರಳ ಹೈಕೋರ್ಟ್ ಪ್ರಶ್ನಿಸಿತ್ತು. ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಇವುಗಳ ಮೇಲೆ ನಡೆಸಿರುವ ದಾಳಿಗೆ ಸಂಬಂಧಿಸಿದಂತೆ ನಡೆಸುತ್ತಿದ್ದ ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು.

‘ಪಿಎಫ್‌ಐ ಮತ್ತು ಎಸ್‌ಡಿಪಿಐ ದೇಶಾದ್ಯಂತ ತೀವ್ರವಾದದ ಸಿದ್ಧಾಂತಗಳನ್ನು ಪ್ರಚುರ ಮಾಡುವುದರಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಾಗಿವೆ. ಈ ಸಂಘಟನೆಗಳು ಭಾರತದ ಹೊರಗೆ ಸಹ ಬೇರುಗಳನ್ನು ಹೊಂದಿವೆ. ದಬ್ಬಾಳಿಕೆ ಮತ್ತು ಬೆದರಿಕೆಯ ಮೂಲಕ ಅವರು ಇತರ ಸಮುದಾಯದ ಜನರನ್ನು ಇಸ್ಲಾಂಗೆ ಮತಾಂತರಿಸುವಲ್ಲಿ ತೊಡಗಿದ್ದಾರೆ’ ಎಂದು ಕಳೆದ ಬಾರಿ ವಿಚಾರಣೆ ವೇಳೆ ನ್ಯಾಯಮೂರ್ತಿ ಕೆ.ಹರಿಪಾಲ್ ಅಭಿಪ್ರಾಯಪಟ್ಟಿದ್ದರು.

ರಾಜ್ಯಾದ್ಯಂತ ಹೈ ಅಲರ್ಟ್‌ಗೆ ಕೇಂದ್ರ ಗುಪ್ತಚರ ಇಲಾಖೆ ಸೂಚನೆ.! ಸಂಘಟನೆಯ ಪ್ರಮುಖರು, ಹಿಂದೂ ಕಾರ್ಯಕರ್ತರು ಎಚ್ಚರಿಕೆ ವಹಿಸುವಂತೆ ಸೂಚನೆ

- Advertisement -

Related news

error: Content is protected !!