ನವದೆಹಲಿ: ಮುಂಬರುವ ದಿನಗಳಲ್ಲಿ ಜಾಗತಿಕವಾಗಿ ಕ್ರಿಫ್ಟೋ ಕರೆನ್ಸಿಯ ಕುರಿತು ಸಂಘಟಿತ ತೀರ್ಮಾನವನ್ನು ತೆಗೆದುಕೊಳ್ಳಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ದಾವೋಸ್ನಲ್ಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಮಾತನಾಡಿದ ಅವರು. ಸದ್ಯ ದೇಶದಲ್ಲಿನ ಆರ್ಥಿಕತೆಗೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ 6 ತಿಂಗಳಿನಲ್ಲಿ 10 ಲಕ್ಷ ಸ್ಟಾರ್ಟ್ಅಪ್ ನೋಂದಣಿಯಾಗಿವೆ. ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ನಾವು ಸಿದ್ಧರಿದ್ದೇವೆ. ಆ ಮೂಲಕ ಈಡೀ ವಿಶ್ವವೇ ನಮ್ಮನ್ನು ನೋಡಲಿದೆ. ದೇಶದಲ್ಲಿ ಹೂಡಿಕೆಗೆ ಇದು ಸೂಕ್ತ ಸಮಯ ಹಾಗಾಗಿ ಭಾರತ ಇದೀಗ ಹೂಡಿಕೆಯ ಮೇಲೆ ಗಮನ ಹರಿಸುತ್ತಿದೆ ಎಂದು ಪ್ರಧಾನಿ ತಿಳಿಸಿದರು.
ಇನ್ನು ದೇಶದಲ್ಲಿ ಅಬ್ಬರ ಶುರು ಮಾಡಿರುವ ಕೋವಿಡ್ ಕುರಿತು ಮಾತನಾಡಿ ಸದ್ಯ ದೇಶ ಮೂರನೇ ಅಲೆ ಎದುರಿಸುತ್ತಿದೆ. ಈ ಮಾರಕ ಸೋಂಕನ್ನು ನಿಯಂತ್ರಣಕ್ಕೆ ತರಲು ನಾವು ಕಟಿಬದ್ಧರಾಗಿ ಕೆಲಸ ಮಾಡುತ್ತಿದ್ದೇವೆ. ಈ ವರೆಗೆ ಸುಮಾರು 160 ಕೋಟಿಯಷ್ಟು ಲಸಿಕೆ ನೀಡಿದ್ದೇವೆ. ಜೊತೆಗೆ 80 ಕೋಟಿ ಜನರಿಗೆ ಉಚಿತ ರೇಷನ್ ವಿತರಿಸಲಾಗಿದೆ ಎಂದು ಪ್ರಧಾನಿ ಮೋದಿ ವಿವರಿಸಿದರು.