Friday, April 26, 2024
spot_imgspot_img
spot_imgspot_img

ಮ್ಯಾಟ್ರಿಮೋನಿ ಸೈಟ್ ಮೂಲಕ ಪರಿಚಯ: 12 ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಮೆಕಾನಿಕಲ್​ ಇಂಜಿನಿಯರ್! ​

- Advertisement -G L Acharya panikkar
- Advertisement -

ಮುಂಬೈ: ಮ್ಯಾಟ್ರಿಮೋನಿ ಸೈಟ್ ಮೂಲಕ ಪರಿಚಯ ಮಾಡಿಕೊಂಡ ಸುಮಾರು 12 ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಮೆಕಾನಿಕಲ್​ ಇಂಜಿನಿಯರ್​ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಮಹೇಶ್​ ಅಲಿಯಾಸ್​ ಕರಣ್​ ಗುಪ್ತಾ(32) ಮುಂಬೈ ಮಲಾಡ್​ ಏರಿಯಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಕರಣ್ ಗುಪ್ತಾ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಸುಶಿಕ್ಷಿತ ಯುವತಿಯರನ್ನೇ ಟಾರ್ಗೆಟ್​ ಮಾಡುತ್ತಿದ್ದು, ಹಾಗೆ ಯುವತಿಯರನ್ನು ಪರಿಚಯಿಸಿಕೊಂಡು ಬಳಿಕ ಫೋನ್​ ನಂಬರ್ ಪಡೆದು ಅವರನ್ನು ಪಬ್​, ರೆಸ್ಟೋರೆಂಟ್​ ಅಥವಾ ಮಾಲ್​ಗಳಲ್ಲಿ ಭೇಟಿ ಮಾಡುತ್ತಿದ್ದನು. ಇಂತಹ ಭೇಟಿಯ ಸಂದರ್ಭದಲ್ಲಿಯೇ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ಡೆಪ್ಯೂಟಿ ಕಮಿಷನರ್​ ಆಫ್​ ಪೊಲೀಸ್​ ಸುರೇಶ್​ ಮೆಂಗಡೆ ಮಾಹಿತಿ ನೀಡಿದ್ದಾರೆ.

ಆರೋಪಿ‌ ಕರಣ್ ಗುಪ್ತಾ ಭಾರೀ ಚಾಲಾಕಿಯಾಗಿದ್ದು, ಪ್ರತಿ ಅಪರಾಧ ಮಾಡುವಾಗಲು ಬೇರೆ ಬೇರೆ ದೂರವಾಣಿ ಸಂಖ್ಯೆಯನ್ನು​ ಬಳಸುತ್ತಿದ್ದು, ಸಿಮ್​ ಕಾರ್ಡ್​ ಗಳನ್ನು ಬದಲಾಯಿಸುವುದೇ ಈತನ ಕಾಯಕವಾಗಿತ್ತು. ಅಲ್ಲದೆ ಆತ ತನ್ನ ಹೆಸರಿನಲ್ಲಿ ನೋಂಣಿಯಾಗದ ಫೋನ್​ ನಂಬರ್​ ಅನ್ನೇ ಬಳಸುತ್ತಿದ್ದು, ಸ್ವಂತ ವಾಹನಗಳನ್ನು ಬಳಸದೇ ಓಲಾ, ಊಬರ್​ ಕ್ಯಾಬ್​ ಮೂಲಕವೇ ಸಂಚಾರ ಮಾಡುತ್ತಿದ್ದನು. ಕಂಪ್ಯೂಟರ್​ ಮೇಲೆ ಉತ್ತಮ ಜ್ಞಾನ ಹೊಂದಿರುವ ಆರೋಪಿ ಕೆಲ ಸಮಯ ಹ್ಯಾಕರ್​ ಆಗಿ ಕೆಲಸ ಮಾಡಿದ್ದು, ಆದರೆ ಇದನ್ನು ಕೆಟ್ಟ ಕೆಲಸಕ್ಕಾಗಿ ಬಳಸಿದ್ದ ಎಂದು ಪೊಲೀಸರು ತಿಳಿಸಿದರು.

ಗೌರವಾನ್ವಿತ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುವ ಆರೋಪಿ, ದೊಡ್ಡ ದೊಡ್ಡ ಕಂಪನಿಗಳಲ್ಲಿ ಈ ಹಿಂದೆ ಕೆಲಸ ಮಾಡಿದ್ದಾನೆ. ಇಲ್ಲಿಯವರಗೆ ಸಿಕ್ಕಿರುವ ಮಾಹಿತಿ ಪ್ರಕಾರ ಈತ 12 ಯುವತಿಯರ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ಕಳೆದ ನಾಲ್ಕು ತಿಂಗಳಿಂದ ಪೊಲೀಸರು ಆರೋಪಿಗಾಗಿ ಹುಡುಕಾಡುತ್ತಿದ್ದರು. ಕೊನೆಗೂ ಪೊಲೀಸ್​ ಬಲೆಗೆ ನಯವಂಚಕ ಬಿದ್ದಿದ್ದು, ಇದೀಗ ಆತನನ್ನು ಕೋರ್ಟ್​ ಮುಂದೆ ಹಾಜರುಪಡಿಸಿ ನಾಲ್ಕು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

- Advertisement -

Related news

error: Content is protected !!