Friday, July 24, 2026
spot_imgspot_img
spot_imgspot_img

ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಯುವರತ್ನನ ಭಾವಚಿತ್ರ

- Advertisement -
- Advertisement -
vtv vitla
vtv vitla
vtv vitla
vtv vitla

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಎರಡು ತಿಂಗಳು ಕಳೆದಿವೆ. ಇವರು ಕರಾವಳಿಯ ಹೆಮ್ಮೆಯ ನಂದಿನಿ ಉತ್ಪನ್ನಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿರೋದು ಗೊತ್ತೇ ಇದೆ. ಅದರಂತೆ ಇದೀಗ ಕೆಎಂಎಫ್ ವತಿಯಿಂದ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ. ನಂದಿನ ಹಾಲಿನ ಪ್ಯಾಕೆಟ್ ಮೇಲೆ ಪುನೀತ್ ರಾಜ್ ಕುಮಾರ್ ಭಾವಚಿತ್ರವನ್ನ ಮುದ್ರಿಸುವ ಮೂಲಕ ವಿಶೇಷ ಗೌರವವನ್ನ ತೋರಿಸಲಾಗಿದೆ.

ನಂದಿನಿ ಹಾಲಿನ ಜಾಹೀರಾತು ರಾಯಭಾರಿಯಾಗಿದ್ದ ಡಾ. ರಾಜ್’ಕುಮಾರ್ ಯಾವುದೇ ಸಂಭಾವನೆ ತೆಗೆದುಕೊಳ್ಳದೆ ರೈತರ ಪರ ನಿಂತಿದ್ದರು. ತಂದೆಯ ಆದರ್ಶಗಳನ್ನ ಪಾಲಿಸಿಕೊಂಡ ಯುವರತ್ನ ಪುನೀತ್ ಕೂಡ ಒಂದು ರೂಪಾಯಿ ಸಂಭಾವನೆ ಪಡೆಯದೆ ಕೆಎಂಎಫ್ ನಂದಿನಿ ಹಾಲಿನ ಉತ್ಪನ್ನಗಳಿಗೆ ರಾಯಭಾರಿಯಾಗಿದ್ದರು.

ಈ ಹಿನ್ನೆಲೆಯಲ್ಲಿ ಕೆಎಂಎಫ್ ನಂದಿನಿ ಪ್ಯಾಕೆಟ್ ಮೇಲೆ ಪುನೀತ್ ರಾಜ್ ಕುಮಾರ್ ಭಾವಚಿತ್ರವನ್ನ ಪ್ರಿಂಟ್ ಮಾಡಿ ವಿಶೇಷ ಗೌರವ ಸೂಚಿಸಲಾಗಿದೆ. ವರ್ಷದ ಕೊನೆಯ ದಿನದಂದು ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಅಪ್ಪು ಭಾವಚಿತ್ರವನ್ನ ಮುದ್ರಿಸಿದ್ದಾರೆ. ಹೀಗಾಗಿ, ಕೋಟ್ಯಾಂತರ ಅಭಿಮಾನಿಗಳಿಗೆ ಸಂತೋಷವಾಗಿದೆ.

- Advertisement -

Related news

error: Content is protected !!