Sunday, August 9, 2026
spot_imgspot_img
spot_imgspot_img

ಪಾಕ್​ಗೆ ಮತ್ತೊಂದು ‘ಸರ್ಜಿಕಲ್ ಸ್ಟ್ರೈಕ್’ ವಾರ್ನಿಂಗ್ ಕೊಟ್ಟ ಅಮಿತ್ ಶಾ

- Advertisement -
- Advertisement -
driving

ಪಾಕಿಸ್ತಾನಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಸರ್ಜಿಕಲ್ ಸ್ಟ್ರೈಕ್ ಮಾಡುವ ವಾರ್ನಿಂಗ್ ಮಾಡಿದ್ದಾರೆ. ಕಾಶ್ಮೀರದಲ್ಲಿ ನಾಗರಿಕರ ಹತ್ಯೆಗೆ ಪಾಕಿಸ್ತಾನ​ ಬೆಂಬಲ ನೀಡ್ತಿದೆ.. ತನ್ನ ಅಕ್ರಮಗಳನ್ನು ನಿಲ್ಲಿಸದಿದ್ದರೆ ಸರ್ಜಿಕಲ್ ಸ್ಟ್ರೈಕ್ ಮಾಡ್ತೀವಿ. ಹಿಂದಿನ ಸರ್ಜಿಕಲ್ ಸ್ಟ್ರೈಕ್​ನಿಂದ ನಿಮಗೆ ನಮ್ಮ ಶಕ್ತಿ ತಿಳಿದಿದೆ.. ನಾವು ದಾಳಿಗಳನ್ನು ಸಹಿಸುವುದಿಲ್ಲ ಎಂಬುದಕ್ಕೆ ಇವು ಸಾಕ್ಷಿ. ಹೀಗೆ ನಿಮ್ಮ ಆಟ ಮುಂದುವರೆದ್ರೆ ಇನ್ನಷ್ಟು ಸರ್ಜಿಕಲ್ ಸ್ಟ್ರೈಕ್ ನಡೆಯುತ್ತವೆ ಎಂದು ಅಮಿತ್ ಶಾ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಗೋವಾದ ಧರ್ಬಂದೋರಾದಲ್ಲಿ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ.. ಮೋದಿ, ಮನೋಹರ್ ಪರಿಕ್ಕರ್ ನೇತೃತ್ವದಲ್ಲಿ ಈ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು. ಆ ಒಂದು ಸರ್ಜಿಕಲ್ ಸ್ಟ್ರೈಕ್ ಭಾರತದ ಮಹತ್ವದ ಹೆಮ್ಮೆಯ ಹೆಜ್ಜೆ. ನಮ್ಮ ಗಡಿಯನ್ನು ಮುಟ್ಟಿದ್ರೆ ಏನಾಗುತ್ತೆ ಎಂಬುದಕ್ಕೆ ಆ ಮೂಲಕ ಸಂದೇಶ ರವಾನೆ ಮಾಡಿದ್ದೇವೆ. ಆಗ ಮಾತುಕತೆಗೆ ಸಮಯವಿತ್ತು, ಈಗ ಪ್ರತ್ಯುತ್ತರ ನೀಡುವ ಸಮಯ ಎಂದು ಹೇಳಿದ್ದಾರೆ.

2016ರಲ್ಲಿ ಉರಿ, ಪಠಾಣ್‌ಕೋಟ್ ಮತ್ತು ಗುರುದಾಸ್‌ಪುರ ದಾಳಿಗೆ ಪ್ರತಿಯಾಗಿ ಭಾರತ ಪಾಕ್​ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ದಾಳಿಯಲ್ಲಿ ಹಲವು ಪಾಕ್​ನ ಭಯೋತ್ಪಾದಕ ಶಿಬಿರಗಳು ಧ್ವಂಸವಾಗಿದ್ದವು.

- Advertisement -

Related news

error: Content is protected !!