Saturday, September 12, 2026
spot_imgspot_img
spot_imgspot_img

ಪುಂಜಾಲಕಟ್ಟೆ: ಗೂಡ್ಸ್‌ ಟೆಂಪೋ ಹಾಗೂ ಪಿಕಪ್ ನಡುವೆ ಢಿಕ್ಕಿ; ಮೂವರು ಗಂಭೀರ..!

- Advertisement -
- Advertisement -

ಪುಂಜಾಲಕಟ್ಟೆ: ಪುಂಜಾಲಕಟ್ಟೆಯ ಶ್ರೀ ರಾಮ ನಗರ ಪ್ರಗತಿ ಹಾರ್ಡ್ ವೇರ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂಡ್ಸ್‌ ಟೆಂಪೋ ಮತ್ತು ಪಿಕಪ್ ವಾಹನದ ನಡುವೆ ಅಪಘಾತ ಸಂಭವಿಸಿ ಮೂವರು ಗಂಭೀರ ಗಾಯಗೊಂಡ ಘಟನೆ ಸೋಮವಾರ ಸಂಜೆ ನಡೆದಿದೆ.

ಧನರಾಜ್ (27), ಶಾಹಿಲ್ (21), ಅವಿನಾಶ್ (18) ಗಾಯಗೊಂಡವರು.

ಮಂಗಳೂರು ಭಾಗದಿಂದ ಕಬ್ಬಿಣದ ರಾಡ್ ಹೇರಿಕೊಂಡು ಬರುತ್ತಿದ್ದ ಗೂಡ್ಸ್‌ ಟೆಂಪೋವು ಪುಂಜಾಲಕಟ್ಟೆಯಿಂದ ಬಂಟ್ವಾಳ ಕಡೆಗೆ ಸಂಚರಿಸುತ್ತಿದ್ದ ಪಿಕಪ್‌ಗೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗೂಡ್ಸ್‌ ಟೆಂಪೋದ ಚಾಲಕನ ಕೈ, ಕಾಲು ತುಂಡಾಗಿದೆ. ಇತರ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ, ಮಿನಿ ಲಾರಿಯ ಮುಂಭಾಗ ಮತ್ತು ಹಿಂಭಾಗ ಪ್ರತ್ಯೇಕಗೊಂಡಿದ್ದು, ಪಿಕಪ್ ಸಂಪೂರ್ಣ ನಜ್ಜುಗುಜ್ಜಾಗಿದೆ.

ಗಾಯಾಳುಗಳನ್ನು ಕೂಡಲೇ ಚಿಕಿತ್ಸೆಗಾಗಿ 108 ಅಂಬ್ಯುಲೆನ್ಸ್‌ನಲ್ಲಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

- Advertisement -

Related news

error: Content is protected !!