- Advertisement -
- Advertisement -

ಹುಬ್ಬಳ್ಳಿ: ಪೊಲೀಸರಿಂದಲೇ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ಸ್ಪೆಕ್ಟರ್ ಸೇರಿ ಏಳು ಜನ ಸಿಬ್ಬಂದಿಯನ್ನು ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಕಳೆದ ವಾರ ಖಚಿತ ಮಾಹಿತಿ ಮೇರೆಗೆ ನವನಗರ ಠಾಣೆ ಪೊಲೀಸರು ಗಾಂಜಾ ಮಾರಾಟಗಾರರನ್ನು ಸೆರೆಹಿಡಿದಿದ್ದರು. ಆದರೆ ನಂತರ ಕೇಸ್ ದಾಖಲಿಸದೇ ಹಣ ಪಡೆದು, ಆರೋಪಿಗಳನ್ನ ಬಿಟ್ಟು ಕಳುಹಿಸಿದ್ದರು. ಜೊತೆಗೆ ಸೀಜ್ ಮಾಡಿದ್ದ 1 ಕೆಜಿ ಗಾಂಜಾವನ್ನು ಪೊಲೀಸರೇ ಮಾರಾಟ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು.

ಹೀಗಾಗಿ ಡಿಸಿಪಿ ನೈತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಅಂತಿಮವಾಗಿ ನವನಗರ ಠಾಣೆ ಇನ್ಸ್ಪೆಕ್ಟರ್ ವಿಶ್ವನಾಥ ಚೌಗಲೆ, ಎಎಸ್ಐ ವಿಕ್ರಮ ಪಾಟೀಲ್ ಸೇರಿದಂತೆ ಏಳು ಜನರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.

- Advertisement -








