Saturday, June 27, 2026
spot_imgspot_img
spot_imgspot_img

ಪ್ಯಾಕ್ ಮಾಡಿದ ತಿಂಡಿಯ ಪೊಟ್ಟಣದಲ್ಲಿತ್ತು ಸತ್ತ ಹಲ್ಲಿ!!

- Advertisement -
- Advertisement -

ಚೆನ್ನೈ: ಪ್ಯಾಕ್ ಮಾಡಿದ ಪಕೋಡಾ ಪ್ಯಾಕೆಟ್‌ನೊಳಗೆ ಸತ್ತ ಹಲ್ಲಿ ಪತ್ತೆಯಾಗಿರುವ ಘಟನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪಲಯಂಕೊಟ್ಟೈನಲ್ಲಿ ನಡೆದಿದೆ.

ಇಲ್ಲಿನ ನಿವಾಸಿಯೊಬ್ಬರು ಸಮೀಪದ ಅಂಗಡಿಯಿಂದ ಪಕೋಡಾದ ತಿಂಡಿ ಪೊಟ್ಟಣ ಖರೀದಿಸಿದ್ದರು ಎಂದು ಹೇಳಲಾಗಿದೆ. ಮನೆಯಲ್ಲಿ ಬಂದು ಪ್ಯಾಕೆಟ್ ತೆರೆದು ನೋಡುವಾಗ ಸತ್ತ ಹಲ್ಲಿ ಪತ್ತೆಯಾಗಿದೆ.

ಎರಡು ದಿನಗಳ ನಂತರ ಈ ವ್ಯಕ್ತಿಯು ವಾಟ್ಸಾಪ್ ಮುಖಾಂತರ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (FSSAI) ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ತನಿಖೆಗೆ ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ.

ಇನ್ನು ಅಂಗಡಿಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ತಪಾಸಣೆ ವೇಳೆ ಅಂಗಡಿಯಲ್ಲಿ ದೂರು ನೀಡಿದ ಉತ್ಪನ್ನ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಂಗಡಿಯಲ್ಲಿದ್ದ ಇತರ ಕೆಲವು ವಸ್ತುಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸುಖಾಸುಮ್ಮನೆ ತಮ್ಮನ್ನು ಸಿಲುಕಿಸಲು ಈ ರೀತಿ ಸುಳ್ಳು ಆರೋಪ ಮಾಡಲಾಗಿದೆ ಎಂದು ಅಂಗಡಿ ಮಾಲೀಕರು ದೂರಿದ್ದಾರೆ.

- Advertisement -

Related news

error: Content is protected !!