Tuesday, July 28, 2026
spot_imgspot_img
spot_imgspot_img

ಬೆಳ್ಳಾರೆ: ಮೃತ ಪ್ರವೀಣ್ ನೆಟ್ಟಾರು ಮನೆಗೆ ಸಿ.ಎಂ ಬೊಮ್ಮಾಯಿ ಭೇಟಿ; ಆರೋಪಿಗಳನ್ನು ಎನ್ಕೌಂಟರ್ ಮಾಡಿದರೆ ಮಾತ್ರ ನನ್ನ ಗಂಡನಿಗೆ ತೃಪ್ತಿ; ಪ್ರವೀಣ್ ಪತ್ನಿ

- Advertisement -
- Advertisement -

ಬೆಳ್ಳಾರೆ: ದುಷ್ಕರ್ಮಿಗಳ ದಾಳಿಗೆ ಬಲಿಯಾದ ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಮನೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ ಸಹಿತ ಜಿಲ್ಲೆಯ ಸಚಿವರು ಭೇಟಿ ನೀಡಿದ್ದಾರೆ.

ಪ್ರವೀಣ್ ಮನೆಯ ಸುತ್ತ ಮುತ್ತ ಇಕ್ಕೆಲಗಳಲ್ಲಿ ಭಾರೀ ಜನಸ್ತೋಮವೇ ಸೇರಿದೆ. ಅದರ ಮದ್ಯೆ ನಡೆದುಕೊಂಡು ಹೋದ ಸಿಎಂ ಬೊಮ್ಮಾಯಿಯವರು ಇದೀಗ ತಾನೇ ಮೃತ ಪ್ರವೀಣ್ ನೆಟ್ಟಾರ್ ಮನೆಗೆ ಭೇಟಿ ನೀಡಿದ್ದಾರೆ.

ಈ ವೇಳೆ ಪ್ರವೀಣ್ ರವರ ಪತ್ನಿ ನೂತನ ರವರು ಸಿಎಂ ರಲ್ಲಿ ಇನ್ನು ಮುಂದೆ ಯಾವ ಕಾರ್ಯಕರ್ತರಿಗೂ ಈ ರೀತಿ ಆಗದಿರಲಿ, ಇನ್ನಾದರೂ ಕಾರ್ಯಕರಿಗೆ ರಕ್ಷಣೆ ನೀಡಿ ಎಂದು ಅಳಲು ತೋಡಿಕೊಂಡಿದ್ದಾರೆ. ಆರೋಪಿಗಳನ್ನು ಎನ್ಕೌಂಟರ್ ಮಾಡಿದರೆ ಮಾತ್ರ ನನಗೂ ನನ್ನ ಗಂಡನಿಗೂ ತೃಪ್ತಿ ದೊರೆಯುವುದೆಂದು ಹೇಳಿಕೊಂಡಿದ್ದಾರೆ.

ಸಿಎಂ ಬೊಮ್ಮಾಯಿ ಮನೆಯವರಿಗೆ ಸಾಂತ್ವನ ಹೇಳಿ, ಆರೋಪಿಗಳಿಗೆ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.

- Advertisement -

Related news

error: Content is protected !!