Tuesday, June 23, 2026
spot_imgspot_img
spot_imgspot_img

ಮಂಗಳೂರು: ಕುದ್ರೋಳಿಯಲ್ಲಿ ಗೆಜ್ಜೆಗಿರಿ ಮೇಳದ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಬಿಡುಗಡೆ

- Advertisement -
- Advertisement -

ಮಂಗಳೂರು: ನವಂಬರ್ 27ರಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಜರಗುವ ಶ್ರೀ ಗೆಜ್ಜೆಗಿರಿ ಮೇಳದ ಉದ್ಘಾಟನೆ ಹಾಗೂ ದೇವರ ಪ್ರಥಮ ಸೇವೆ ಆಟದ ಆಮಂತ್ರಣ ಪತ್ರಿಕೆಯನ್ನು ಮಂಗಳೂರಿನ ಕುದ್ರೋಳಿಯ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶಗಳ ರಂಗ ಚಾಲನೆ ಕಾರ್ಯಕ್ರಮದಲ್ಲಿ ಬಿ. ಜನಾರ್ಧನ ಪೂಜಾರಿ ಅನಾವರಣಗೊಳಿಸಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಕೋಶಾಧಿಕಾರಿ ಪದ್ಮರಾಜ್ ಆರ್, ಗೆಜ್ಜೆಗಿರಿ ಕ್ಷೇತ್ರದ ಉಪಾಧ್ಯಕ್ಷ ರವಿಪೂಜಾರಿ ಚಿಲಿಂಬಿ, ಟ್ರಸ್ಟಿ ಶೈಲೇಂದ್ರ ಸುವರ್ಣ, ಎಚ್ ಜನಾರ್ಧನ, ರಾಜೇಂದ್ರ ಚಿಲಿಂಬಿ, ಸುರೇಶ್ ಪೂಜಾರಿ, ಮುಂತಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!